ಬಾಗಲಕೋಟೆ : ಹೋಳಿ ಹಬ್ಬದ ಖುಷಿಯಲ್ಲಿದ್ದ ಬಾಗಲಕೋಟೆಯ ಜನರಿಗೆ ಇದೀಗ ಕೊರೊನಾ ವೈರಸ್ ನಿಂದ ಅವರ ಸಂಭ್ರಮಕ್ಕೆ ಬ್ರೇಕ್ ಬಿದ್ದಿದೆ. ಹೋಳಿ ಹಬ್ಬದ ಸಂಭ್ರಮಾಚರಣೆಗೆ ಬಾಗಲಕೋಟೆ ಜನರು ಪ್ರತಿವರ್ಷ ವಿದೇಶ ಪ್ರವಾಸ ಹೋಗುತ್ತಿದ್ದರು. ಸುಮಾರು 200ರಿಂದ 300 ಜನ ವಿದೇಶಕ್ಕೆ ಹೋಗುತ್ತಿದ್ದರು. ಆದರೆ ಈ ಬಾರಿ ಕೊರೊನಾ ಹರಡುವ ಭೀತಿ ಎದುರಾದ ಹಿನ್ನಲೆಯಲ್ಲಿ ಬಾಗಲಕೋಟೆಯ ಜನರು ವಿದೇಶ ಪ್ರವಾಸ ರದ್ದು ಮಾಡಿದ್ದಾರೆ ಎನ್ನಲಾಗಿದೆ.