Select Your Language

Notifications

webdunia
webdunia
webdunia
webdunia

ಚಿತ್ರಮಂದಿರಗಳಲ್ಲಿ ಕೂಲ್ ಡ್ರಿಂಕ್ಸ್ ಬ್ಯಾನ್.. ಎಳನೀರು ಮಾತ್ರ ಸಿಗುತ್ತೆ..?

ಚಿತ್ರಮಂದಿರಗಳಲ್ಲಿ ಕೂಲ್ ಡ್ರಿಂಕ್ಸ್ ಬ್ಯಾನ್.. ಎಳನೀರು ಮಾತ್ರ ಸಿಗುತ್ತೆ..?
ಬೆಂಗಳೂರು , ಶುಕ್ರವಾರ, 11 ಆಗಸ್ಟ್ 2017 (10:40 IST)
ಸಂಕಷ್ಟದಲ್ಲಿರುವ ರೈತರ ನೆರವಿಗೆ ಬರುವ ದೃಷ್ಟಿಯಿಂದ ರಾಜ್ಯ ಸರ್ಕಾರ ಮಲ್ಟಿಪ್ಲೆಕ್ಸ್ ಮತ್ತು ಇನ್ನುಳಿದ ಚಿತ್ರಮಂದಿರಗಳಲ್ಲಿ ಕೂಲ್ ಡ್ರಿಂಕ್ಸ್ ರದ್ದು ಮಾಡಿ ಎಳನೀರು ಮಾರಾಟ ಮಾಡಬೇಕೆಂಬ ನಿರ್ಧಾರಕ್ಕೆ ಬಂದಿದೆ.  

ಮೈಸೂರು ಜಿಲ್ಲಾಧಿಕಾರಿ ರಣದೀಪ್ ಕಡ್ಡಾಯವಾಗಿ ಎಳನೀರು ಮಾರುವಂತೆ ಆದೇಶ ಮಾಡಿದ್ಧಾರೆ. ಮೈಸೂರಿನಲ್ಲಿ ಪ್ರಥಮ ಬಾರಿಗೆ ಆದೇಶ ಜಾರಿ ಬಂದಿದೆ. ಮೈಸೂರು ಚಿತ್ರಮಂದಿರಗಳ ಒಕ್ಕೂಟದ ಅಧ್ಯಕ್ಷರಿಗೆ ಪತ್ರ ರವಾನಿಸಿದ್ಧಾರೆ ಎಂದು ತಿಳಿದು ಬಂದಿದೆ.

ರಾಜ್ಯದ ರೈತರ ಹಿತದೃಷ್ಟಿಯಿಂದ ಚಿತ್ರಮಂದಿಗಳಲ್ಲಿ ಎಳನೀರು ಮಾರಲು ಆದೇಶಿಸುವಂತೆ ಪರಿಷತ್ ಸದಸ್ಯ ಪ್ರಾಣೇಶ್ ಎಂಬುವವರು ತೋಟಗಾರಿಕಾ ಸಚಿವರಿಗೆ ಪತ್ರ ಬರೆದಿದ್ದರು. ಿದರಮ್ವಯ ರಾಜ್ಯದ ಎಲ್ಲ ಜಿಲ್ಲಾಧಿಕಾರಿಗೆ ಆದೇಶ ಹೋಗಿದೆ ಎಂದು ತಿಳಿದುಬಂದಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ತುಳುವಿನಲ್ಲಿ ಸದಾನಂದ ಗೌಡರ ಇಂಟರೆಸ್ಟಿಂಗ್ ಟ್ವೀಟ್