ಹಿಂದೂಗಳು ಬುರ್ಖಾ ಧರಿಸಲಿ ಎಂದು ನಾನು ಹೇಳಿಲ್ಲ. ಯಾರು ಬೇಕಾದರೂ ಧರಿಸಬಹುದು ಎಂದು ಹೇಳಿದ್ದೆ ಎಂದು ಉನ್ನತ ಶಿಕ್ಷಣ ಸಚಿವ ಬಸವರಾಜ್ ರಾಯರೆಡ್ಡಿ ಯು-ಟರ್ನ್ ತೆಗೆದುಕೊಳ್ಳುವ ಮೂಲಕ ವಿವಾದವನ್ನು ತಣ್ಣಗಾಗಿಸುವ ಪ್ರಯತ್ನ ಮಾಡಿದ್ದಾರೆ.
ಕೊಪ್ಪಳದಲ್ಲಿ ಮಂಗಳವಾರ ಕನ್ನಡ ರಾಜ್ಯೋತ್ಸವದ ಧ್ವಜಾರೋಹಣ ನೆರವೇರಿಸಿ ಮಾತನಾಡುತ್ತಿದ್ದ ಅವರು ಕೆಲವರು ಸುಖಾಸುಮ್ಮನೆ ನನ್ನ ಮೇಲೆ ಆರೋಪ ಹೊರಿಸುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.
ಬೂರ್ಕಾ ಕೇವಲ ಮುಸ್ಲಿಂರ ಉಡುಪಲ್ಲ. ಅದನ್ನು ಯಾರೂ ಬೇಕಾದರೂ ಧರಿಸಬಹುದು ಎಂದು ಮತ್ತೊಮ್ಮೆ ಪುನರುಚ್ಚಿಸುವ ಮೂಲಕ ಉನ್ನತ ಶಿಕ್ಷಣ ಸಚಿವ ಬಸವರಾಜ್ ರಾಯರೆಡ್ಡಿ ಸೋಮವಾರ ಬೂರ್ಕಾ ವಿವಾದಕ್ಕೆ ಮತ್ತಷ್ಟು ತುಪ್ಪ ಸುರಿದಿದ್ದರು.
ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಅವರು, ಈ ಹಿಂದೆ ಹೇಳಿಕೆ ನೀಡಿದಂತೆ ಬೂರ್ಕಾ ಧಿರಿಸನ್ನು ಯಾರೂ ಬೇಕಾದರೂ ಧರಿಸಬಹುದು. ಅದನ್ನು ಮುಸ್ಲಿಂರು ಮಾತ್ರ ಧರಿಸುತ್ತಾರೆ ಎಂದು ಒಂದೇ ಸಮುದಾಯಕ್ಕೆ ಅದನ್ನು ಯಾಕೆ ಸೀಮಿತಗೊಳಿಸಬೇಕು ಎಂದು ಪ್ರಶ್ನಿಸಿದ್ದರು.
ಕಾಲೇಜ್ ಗೆ ಬೂರ್ಕಾ ಜೊತೆ ಕೇಸರಿ ಶಾಲು ಬೇಕಾದರೂ ಹಾಕಿಕೊಂಡು ಬರಬಹುದು. ಉಡುಪು ಅವರವರ ಆಯ್ಕೆ. ಆದರೆ, ಕಾಲೇಜು ವೇಳೆಯಲ್ಲಿ ಡೀಸೆಂಟ್ ಬಟ್ಟೆಯನ್ನಷ್ಟೇ ತೊಡಬೇಕು ಎನ್ನುವುದು ನಮ್ಮ ಆಶಯ. ಆದರೆ, ಇಂತಹದ್ದೇ ಬಟ್ಟೆ ತೊಡಬೇಕು ಎಂದು ಹೇಳಲು ನಾನ್ಯಾರು? ಎಂದ ರಾಯರೆಡ್ಡಿ, ಕೆಲವು ಮತೀಯವಾದಿಗಳು ಮಾಧ್ಯಮಗಳಲ್ಲಿ ಅದನ್ನು ವೈಭವೀಕರಿಸುತ್ತಿದ್ದಾರೆ ಎಂದಿದ್ದರು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ