Daily Horoscope

Select Your Language

Notifications

webdunia
webdunia
webdunia
webdunia

ವಿವಾದಿತ ಪಾರ್ಕ್ ತಿದ್ದುಪಡಿ ಮಸೂದೆ ವಾಪಾಸ್‌: ಹೋರಾಟಕ್ಕೆ ಸಿಕ್ಕ ಜಯ ಎಂದ ವಿಜಯೇಂದ್ರ

BJP President BY Vijayendra
ಬೆಂಗಳೂರು: ಉದ್ಯಾನ ನಗರಿ ಬೆಂಗಳೂರಿನ ಜೀವನಾಡಿಯೇ ಉದ್ಯಾನವನಗಳು. ಅಂತಹ ಉದ್ಯಾನಗಳ ಶೇ. 5 ರಷ್ಟು ಜಾಗವನ್ನು ಕಬಳಿಸಲು ಹೊರಟಿದ್ದ ಈ ಭ್ರಷ್ಟ @INCKarnataka  ಸರ್ಕಾರದ ನಡೆಗೆ ಸಾರ್ವಜನಿಕರ, ಪರಿಸರ ಪ್ರೇಮಿಗಳ ಹಾಗೂ ನಮ್ಮ ಪಕ್ಷದ ತೀವ್ರ ಪ್ರತಿರೋಧದಿಂದ, ವಿಧಿಯಿಲ್ಲದೆ ಉದ್ಯಾನ ಭೂಮಿ ಬಳಕೆ ತಿದ್ದುಪಡಿ ಮಸೂದೆಯನ್ನು ಹಿಂಪಡೆಯಲು ಸಚಿವ ಸಂಪುಟ ನಿರ್ಧರಿಸಿರುವುದು ಕನ್ನಡಿಗರ, ಅದರಲ್ಲೂ ಬೆಂಗಳೂರಿನ ನಾಗರಿಕರ ಜಾಗೃತಿ, ಪ್ರತಿಭಟನೆ ಮತ್ತು ಹೋರಾಟಕ್ಕೆ ಸಿಕ್ಕ ಜಯ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಹೇಳಿದ್ದಾರೆ. 

ಈ ಸಂಬಂಧ ಅವರು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ. 

ಸೂಕ್ತ ಅಧ್ಯಯನ ಮಾಡದೆ,  ಜನಹಿತವನ್ನು ನಿರ್ಲಕ್ಷಿಸಿ, ಏಕಾಏಕಿ ಇಂತಹ ಕೆಟ್ಟ ನೀತಿಗಳನ್ನು ತಂದು ಸಾರ್ವಜನಿಕರಿಗೆ ಸಂಕಷ್ಟ ತಂದೊಡ್ಡುವುದು ಈ ಕಾಂಗ್ರೆಸ್ ಸರ್ಕಾರಕ್ಕೆ ಅಭ್ಯಾಸವಾಗಿ ಹೋಗಿದೆ.

ಈ ಕಾಂಗ್ರೆಸ್ ಸರ್ಕಾರಕ್ಕೆ ರಾಜ್ಯದ ಅಭಿವೃದ್ಧಿಯೂ ಬೇಕಿಲ್ಲ, ಜನಹಿತದ ಬಗ್ಗೆ ಕಾಳಜಿಯೂ ಇಲ್ಲ. ರಿಯಲ್ ಎಸ್ಟೇಟ್ ಒಂದೇ ಅದರ ಆದ್ಯತೆ! ಬಿಡದಿ ಟೌನ್ ಶಿಪ್ ನೆಪದಲ್ಲಿ ರಿಯಲ್ ಎಸ್ಟೇಟ್,  ಎರಡನೇ ವಿಮಾನ ನಿಲ್ದಾಣದ ನೆಪದಲ್ಲಿ ರಿಯಲ್ ಎಸ್ಟೇಟ್, ನಂತರ ಉದ್ಯಾನದ ಭೂಕಬಳಿಸಲು ಹುನ್ನಾರ, ಇದೇ ಇವರ ಆದ್ಯತೆ! ನಮ್ಮ ಹಸಿರು ಸಿರಿಯನ್ನೇ ವ್ಯಾಪಾರೀಕರಣಗೊಳಿಸಲು ಯತ್ನಿಸಿದ ಮುಖ್ಯಮಂತ್ರಿ ಶ್ರೀ @DKShivakumar
 ಸರ್ಕಾರದ ಪ್ರಯತ್ನಕ್ಕೆ ತಡೆಯುಂಟಾಗಿದೆ.

ಜನರ ತೀವ್ರ ವಿರೋಧ, ಪ್ರತಿಪಕ್ಷಗಳ ಗಟ್ಟಿ ದ್ವನಿ ಹಾಗೂ  ಆಕ್ಷೇಪಕ್ಕೆ ಬೆದರಿ ಮಸೂದೆ ವಾಪಸ್ ಪಡೆದಿದ್ದರೂ, 'ಮುಂದಿನ ಅಧಿವೇಶನದಲ್ಲಿ ಇದನ್ನು ಕಿಂಚಿತ್ತೂ ಬದಲಾಯಿಸದೆ ಮರುಮಂಡಿಸುತ್ತೇವೆ' ಎಂಬ ಸಚಿವ ಶ್ರೀ @PriyankKharge
 ಅವರ ಹೇಳಿಕೆ ಈ ಕಾಂಗ್ರೆಸ್ ಸರ್ಕಾರದ ಅಧಿಕಾರ ಮದ, ಅಹಂಕಾರ, ರಿಯಲ್ ಎಸ್ಟೇಟ್ ಹಪಹಪಿ ಹಾಗೂ ಲೂಟಿಕೋರ ಮನಸ್ಥಿತಿಯನ್ನು ಅನಾವರಣಗೊಳಿಸಿದೆ.

ಕಬ್ಬನ್ ಪಾರ್ಕ್‌ನಂತಹ ಐತಿಹಾಸಿಕ ತಾಣಗಳನ್ನು ಮತ್ತು ಉದ್ಯಾನನಗರಿಯ ಪರಿಸರವನ್ನು ರಿಯಲ್ ಎಸ್ಟೇಟ್ ದಂಧೆಗೆ ಬಲಿ ಕೊಡಲು ನಾವು ಯಾವುದೇ ಕಾರಣಕ್ಕೂ ಬಿಡುವುದಿಲ್ಲ. ಮುಂದಿನ ಅಧಿವೇಶನದಲ್ಲಿ ನೀವು ಮತ್ತೆ ಈ ಜನವಿರೋಧಿ ಮಸೂದೆಯನ್ನು ಮಂಡಿಸಲು ಯತ್ನಿಸಿದರೆ, ಬಿಜೆಪಿ ಸದನದ ಒಳಗೂ, ಹೊರಗೂ ಮತ್ತಷ್ಟು ಉಗ್ರ ಹೋರಾಟ ನಡೆಸುವುದು ನಿಶ್ಚಿತ. ಪ್ರಜಾಪ್ರಭುತ್ವದಲ್ಲಿ ಪ್ರಜೆಗಳ ಆಶಯಕ್ಕೆ ವಿರುದ್ಧವಾಗಿ ಏನನ್ನೂ ಮಾಡಲು ನಾವು ಬಿಡುವುದಿಲ್ಲ!

Share this Story:

Follow Webdunia kannada

ಮುಂದಿನ ಸುದ್ದಿ

ಭಾರತದ ಆರ್ಥಿಕ ಬೆಳವಣಿಗೆ ಜಗತ್ತಿಗೆ ವಿಶ್ವಾಸದ ಮೂಲ: ಪ್ರಧಾನಿ ಮೋದಿ