ಬಳ್ಳಾರಿ ಗ್ರಾಮಾಂತರ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಎನ್ ವೈ ಗೋಪಾಲಕೃಷ್ಣ ಗೆಲುವಿನ ನಗೆ ಬೀರುವ ಮೂಲಕ ಶ್ರೀರಾಮಲು ಭದ್ರಕೋಟೆಯನ್ನು ಕೈ ವಶ ಪಡಿಸಿಕೊಂಡಿದ್ದಾರೆ.
ಶ್ರೀರಾಮಲು ಆಪ್ತ ಒಬಳೇಶ ಅವರನ್ನು30,000 ಕ್ಕಿಂತ ಹೆಚ್ಚು ಮತಗಳ ಭರ್ಜರಿ ಅಂತರದಿಂದ ಅವರು ಹೊಡೆದುರುಳಿಸಿದ್ದಾರೆ.
ಬಳ್ಳಾರಿಯ ಗಣಿ ಧೂಳಿನಲ್ಲಿ ಕಮಲ ಮುಚ್ಚಿ ಹೋಗಿದ್ದು, ಶ್ರೀರಾಮಲು ತೀವೃ ಮುಖಭಂಗವನ್ನು ಅನುಭವಿಸಿದ್ದಾರೆ.
ಒಟ್ಟು 33, 144 ಮತಗಳ ಅಂತರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆಲುವನ್ನು ತಮ್ಮದಾಗಿಸಿಕೊಂಡಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಶ್ರೀರಾಮಲು ಸೋಲಿನ ಹೊಣೆಯನ್ನು ತಾವೇ ಹೋರುವುದಾಗಿ ಹೇಳಿದ್ದಾರೆ. ಕಾಂಗ್ರೆಸ್ ಇಲ್ಲಿ ಹಣ ಮತ್ತು ತೋಳ್ಬಲದಿಂದ ಗೆಲುವು ಸಾಧಿಸಿದೆ ಎಂದು ಅವರು ಆಪಾದಿಸಿದ್ದಾರೆ.