Select Your Language

Notifications

webdunia
webdunia
webdunia
webdunia

ಶಾಸಕ ಲಿಂಬಾವಳಿ ಮಹಿಳೆಗೆ ನಿಂದಿಸಿದ ವಿಚಾರಕ್ಕೆ ಕಾಂಗ್ರೆಸ್ ಟ್ವೀಟ್ ವಾರ್

webdunia
bangalore , ಶನಿವಾರ, 3 ಸೆಪ್ಟಂಬರ್ 2022 (20:28 IST)
ಇಡಿ ಬಿಜೆಪಿ ನಾಯಕರ ವರದಿಯನ್ನ  ಕೈ ಪಡೆ ಬಿಚ್ಚಿಟ್ಟಿದೆ.ಮಹಿಳೆಯರ ವಿಚಾರದಲ್ಲಿ ಯಾವ ಯಾವ ನಾಯಕರೂ ಹೇಗೆ ನಡುದುಕಿಂಡಿದ್ದಾರೆ ಎಂದು ಟ್ವೀಟ್ ನಲ್ಲಿ ಉಲ್ಲೇಖ ಮಾಡಿದ್ದಾರೆ.ಬಿಜೆಪಿ ನಾಯಕರೂ ಮಹಿಳೆಯರಿಗೆ ಕೊಡುವ ಗೌರವ ಇದೇನಾ ಎಂದು ಪ್ರಶ್ನೆ....?ಮಹಿಳೆಗೆ ಮಾಧುಸ್ವಾಮಿ ನಿಂದಿಸಿದ್ದರು.ಸಿದ್ದು ಸವದಿ ಮಹಿಳೆಗೆ ಹಲ್ಲೆ ಮಾಡಿದ್ದರು.ರಮೇಶ್ ಜಾರಕಿಹೊಳಿಉದ್ಯೋಗ ಕೇಳಿದಾಕೆಯನ್ನು ಮಂಚ ಹತ್ತಿಸಿದ್ದರು .ಅತ್ಯಾಚಾರ ಸಂತ್ರಸ್ತೆಯದ್ದೇ ತಪ್ಪು ಎಂದು ಅರಗ ಜ್ಞಾನೇಂದ್ರ ಹೇಳಿದ್ರು.ಆದ್ರೆ ಇದೀಗ ಅರವಿಂದ್ ಲಿಂಬಾವಳಿ ಮಹಿಳೆಯ ಮೇಲೆ ದರ್ಪ ಮೆರೆದಿದ್ದಾರೆ.ಇದೇನಾ ಬಿಜೆಪಿಯ ಸ್ತ್ರೀಗೌರವದ ಸಂಸ್ಕೃತಿ? ಎಂದು ಕಾಂಗ್ರೆಸ್ ಟ್ವೀಟ್ ನಲ್ಲಿ ಕಿಡಿಕಾರಿದೆ.
 
ಶಾಸಕ ಲಿಂಬಾವಳಿ ರಾಜೀನಾಮೆಯನ್ನ ಕಾಂಗ್ರೆಸ್ ಕೇಳಿದೆ.ಕರ್ನಾಟಕ ಬಿಜೆಪಿ ಯ ಸ್ತ್ರೀಪರ ಕಾಳಜಿಯ ವೀರಾಧಿವೀರರೇ,ಸಿಡಿ ಶೂರರೇ, ಕೋರ್ಟಿನಿಂದ ತಡೆಯಾಜ್ಞೆ ತಂದ ಧೀರರೇ..ನಿಮ್ಮ ಪಕ್ಷದ ಅರವಿಂದ್ ಲಿಂಬಾವಳಿಯ ಮಹಿಳೆ ಮೇಲಿನ ದೌರ್ಜನ್ಯಕ್ಕೆ ರೊಚ್ಚಿಗೇಳುವುದು ಯಾವಾಗ?ಸ್ತ್ರೀ ಕುಲದ ಗೌರವವನ್ನು ಎತ್ತಿ ಹಿಡಿಯುವುದು ಯಾವಾಗ?ನಳಿನ್ ಕುಮಾರ್ ಕಟೀಲ್ ಅವರೇ, ಲಿಂಬಾವಳಿಯವರನ್ನು ಉಚ್ಛಾಟಿಸುವುದು ಯಾವಾಗ? ಹೀಗೆ ಪ್ರಶ್ನೆಗಳ ಮೇಲೆ ಪ್ರಶ್ನೆಗಳನ್ನ ಕೇಳುತ್ತ ಲಿಂಬಾವಳಿ ವಿರುದ್ಧ ಕಾಂಗ್ರೆಸ್ ಟ್ವೀಟ್ ವಾರ್ ನಡೆಸಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಆರ್ ಟಿ ಇ 8 ರಿಂದ 12 ನೇ ತರಗತಿವರೆಗೂ ವಿಸ್ತರಿಸಲು ಚಿಂತನೆ..!