ಬೆಂಗಳೂರು : ಲೋಕಸಭೆ ಚುನಾವಣೆಗೆ ಭರ್ಜರಿ ಸಿದ್ದತೆ ನಡೆಸಿರುವ ಈ ವೇಳೆಯಲ್ಲಿ ಕಾಂಗ್ರೆಸ್ ವಕ್ತಾರ ಸುರ್ಜೆವಾಲ, ಬಿಜೆಪಿ ಅಧ್ಯಕ್ಷ ಯಡಿಯೂರಪ್ಪ ಅವರ  ಡೈರಿ ಬಿಡುಗಡೆ ಮಾಡಿದ್ದು,  ಈಗ ರಾಜ್ಯ ರಾಜಕೀಯ ವಲಯದಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾಗಿದೆ.
									
			
			 
 			
 
 			
					
			        							
								
																	
ಯಡಿಯೂರಪ್ಪ ಸಿಎಂ ಆಗಿದ್ದಾಗ ಬಿಜೆಪಿ ಕೇಂದ್ರ ನಾಯಕರಿಗೆ 1,800 ಕೋಟಿ ರೂ. ಹಣ ವರ್ಗಾವಣೆ ಮಾಡಿದ್ದಾರೆ. ಈ ಬಗ್ಗೆ ಡೈರಿಯಲ್ಲಿ ಉಲ್ಲೇಖವಾಗಿದೆ ಎಂದು ಆರೋಪಿಸಿ ಕಾಂಗ್ರೆಸ್ ವಕ್ತಾರ ರಣದೀಪ್ ಸುರ್ಜೆವಾಲಾ ಡೈರಿಯೊಂದನ್ನೂ ಬಿಡುಗಡೆ ಮಾಡಿದ್ದಾರೆ.
									
										
								
																	
ಹಾಗೇ ಕಾಂಗ್ರೆಸ್ ವಕ್ತಾರ ಸುರ್ಜೆವಾಲ ಬಿಡುಗಡೆ ಮಾಡಿರುವ ಡೈರಿಯಲ್ಲಿ 2009 ಫೆಬ್ರವರಿ ದಿನಾಂಕದ ಒಂದು ಪುಟದಲ್ಲಿ ನನ್ನ ಧರ್ಮಪತ್ನಿ ,ಮೈತ್ರಾದೇವಿ ಕಾಲವಾದ ನಂತರ ನನಗೆ ಒಂಟಿತನ ಭಯಂಕರ ಕಾಡಲು ಪ್ರಾರಂಭವಾಯಿತು, ಆದ್ದರಿಂದ ಶೋಭಾ ಕರಂದ್ಲಾಜೆ ಅವರನ್ನು ಕೇರಳದ ಚೋಬಣಕೆರೆ ಭಗವತಿ ದೇವಾಲಯದಲ್ಲಿ ಹಿಂದೂ ಸಂಪ್ರದಾಯದಂತೆ ಲಗ್ನ ಮಾಡಿಕೊಂಡು ನನ್ನ ಪತ್ನಿಯಾಗಿ ಕಾಯಾ ವಾಚಾ ಮನಸಾ ಸ್ವೀಕರಿಸುತ್ತೇನೆ, ಇದಕ್ಕೆ ಯಡಿಯೂರು ಸಿದ್ದಲಿಂಗನೇ ಸಾಕ್ಷಿ ಎಂಬ ಕೈ ಬರಹವಿದೆ' ಎಂದು ಡೈರಿಯಲ್ಲಿ ಉಲ್ಲೇಖಿಸಲಾಗಿದೆ.
									
											
							                     
							
							
			        							
								
																	
 ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಯಡಿಯೂರಪ್ಪ, ಕಾಂಗ್ರೆಸ್ ಪಕ್ಷ ಮತ್ತು ಅದರ ನಾಯಕರು ವೈಚಾರಿಕವಾಗಿ ದಿವಾಳಿಯಾಗಿದ್ದಾರೆ. ಕಾಂಗ್ರೆಸ್ ನಾಯಕರು ಸಾರ್ವಜನಿಕವಾಗಿ ಚರ್ಚಿಸಲು ಯಾವುದೇ ಅಭಿವೃದ್ಧಿ ಪರ ವಿಷಯಗಳಿಲ್ಲ. ಹಾಗಾಗಿ ನಕಲಿ ಡೈರಿಯನ್ನು ಬಿಡುಗಡೆ ಮಾಡಿದ್ದಾರೆ ಎಂದು ಹೇಳಿದ್ದಾರೆ.
									
			                     
							
							
			        							
								
																	
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ 
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.