Select Your Language

Notifications

webdunia
webdunia
webdunia
webdunia

ರಾಜ್ಯವನ್ನು ಲೂಟಿ ಮಾಡಿರುವುದೇ ಕಾಂಗ್ರೆಸ್ ಪಕ್ಷದ ಸಾಧನೆ: ಕುಮಾರಸ್ವಾಮಿ

ರಾಜ್ಯವನ್ನು ಲೂಟಿ ಮಾಡಿರುವುದೇ ಕಾಂಗ್ರೆಸ್ ಪಕ್ಷದ ಸಾಧನೆ: ಕುಮಾರಸ್ವಾಮಿ
ಸಿಂಧನೂರು , ಮಂಗಳವಾರ, 1 ಆಗಸ್ಟ್ 2017 (18:23 IST)
ನಮ್ಮದು ನುಡಿದಂತೆ ನಡೆದ ಸರಕಾರ ಎಂದು ಸಿಎಂ ಸಿದ್ದರಾಮಯ್ಯ ಹೇಳುತ್ತಿದ್ದಾರೆ. ನುಡಿದಂತೆ ಏನು ನಡೆದುಕೊಂಡಿದ್ದಾರೆ ಎನ್ನುವುದನ್ನು ದುರ್ಬಿನ್ ಹಿಡಿದು ಹುಡುಕುತ್ತಿದ್ದೇನೆ ಎಂದು ಮಾಜಿ ಸಿಎಂ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ವ್ಯಂಗ್ಯವಾಡಿದ್ದಾರೆ.
 
ಜಾಹಿರಾತಿಗೆ ಬಳಸಿದ್ದ ಹಣ ಯೋಜನೆಗಳಿಗೆ ಬಳಸಬಹುದಿತ್ತು. ಹಾಗೆ ಮಾಡಿದ್ರೆ ಸರಕಾರ ಜನರ ವಿಶ್ವಾಸ ಗಳಿಸಬಹುದಿತ್ತು. ಯೋಜನೆಗಳ ಹೆಸರಲ್ಲಿ ಲೂಟಿ ಮಾಡಿರುವುದೇ ಕಾಂಗ್ರೆಸ್ ಪಕ್ಷದ ಸಾಧನೆಯಾಗಿದೆ ಎಂದು ಆರೋಪಿಸಿದರು.
 
ಅಂಬೇಡ್ಕರ್ ಹೆಸರಲ್ಲಿ ನಾಲ್ಕು ದಿನ ಸಮಾವೇಶ ಮಾಡಿದರು. ಅಂತಾರಾಷ್ಟ್ರೀಯ ಸಮಾವೇಶದ ಹೆಸರಲ್ಲಿ 24 ಕೋಟಿ ವೆಚ್ಚ ಮಾಡಿದರು. ಕೇವಲ ಅನಗತ್ಯ ವೆಚ್ಚಗಳಿಗೆ ಕೈಹಾಕಿರುವುದಕ್ಕೆ ಸರಕಾರಕ್ಕೆ ನಾಚಿಕೆಯಾಗಬೇಕು ಎಂದು ಅಸಮಾಧಾನ ವ್ಯಕ್ತಪಡಿಸಿದರು. 
 
ವೀರಶೈವ ಮತ್ತು ಲಿಂಗಾಯುತರಲ್ಲಿ ಸ್ವಾಮಿಜಿಗಳಿದ್ದಾರೆ. ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುತ್ತಾರೆ. ಅದರಲ್ಲಿ ನಿಮಗೇನು ಕೆಲಸ ಸಿದ್ದರಾಮಯ್ಯನವರೇ? ಬೆಂಕಿ ಹಚ್ಚಿ ಕುಳಿತಿದ್ದೀರಿ? ಅದು ಬೇರೆಯವರನ್ನು ಸುಡುವ ಮೊದಲು ನಿಮ್ಮ ಪಕ್ಷವನ್ನೇ ಸುಡುತ್ತದೆ ಎಂದು ಮಾಜಿ ಸಿಎಂ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ದಂಡುಪಾಳ್ಯ ಬೆತ್ತಲೆ ಬೆನ್ನಿನ ಪೂಜಾಗಾಂಧಿ ಫೋಟೋಗೆ ಮಾತೆ ಮಹಾದೇವಿ ಫೋಟೋ ಅಂಟಿಸಿ ಅವಹೇಳನ