Publish Date: Tue, 31 Jan 2017 (16:41 IST)
Updated Date: Tue, 31 Jan 2017 (16:43 IST)
ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರನ್ನು ಮನವೊಲಿಸುವಲ್ಲಿ ಪಕ್ಷ ಕಾರ್ಯಗತವಾಗಿದೆ. ಈ ಸಮಸ್ಯೆಗೊಂದು ಪರಿಹಾರ ಹುಡುಕುತ್ತೇವೆ ಎಂದು ಕಾಂಗ್ರೆಸ್ ನಾಯಕ ಆಸ್ಕರ್ ಫರ್ನಾಂಡಿಸ್ ಹೇಳಿದ್ದಾರೆ.
ಉಡುಪಿ ಕೃಷ್ಣ ಮಠದ ರಾಜಾಂಗಣದಲ್ಲಿ ನಡೆದ ಕರ್ಯಕ್ರಮದಲ್ಲಿ ಭಾಗವಹಿಸಿ, ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದು ಮನೆಯೊಳಗಿನ ವಿಚಾರ, ಮನೆ ಮಂದಿ ಚರ್ಚಿಸಿ ಸಮಸ್ಯೆ ನಿಭಾಯಿಸುತ್ತೇವೆ ಎಂದರು.
ಹಿರಿಯ ಕಾಂಗ್ರೆಸ್ ಮುಖಂಡ ಜನಾರ್ದನ ಪೂಜಾರಿ ಅವರು ದೇವರು ನೀಡಿರುವ ಜವಾಬ್ದಾರಿಯನ್ನು ನಿಭಾಯಿಸುತ್ತಿದ್ದಾರೆ. ಅವರು ದಾರಿ ತೋರಿಸುವ ಕೆಲಸ ಮಾಡಿದರೆ ತಿದ್ದಿಕೊಳ್ಳುತ್ತೇವೆ ಎಂದರು.
ಪಕ್ಷದ ಹಿರಿಯ ನಾಯಕ ಜಾಫರ್ ಷರೀಫ್ ಅಸಮಾಧಾನ ಕುರಿತು ಮಾಹಿತಿ ಇಲ್ಲ. ರಾಜಕೀಯ ಅಂದಮೇಲೆ ಸಮಸ್ಯೆಗಳ ಉದ್ಭವ ಸಾಮಾನ್ಯ. ಪೂರ್ತಿ ಪ್ರಯಾಸಪಟ್ಟು ಸಮಸ್ಯೆ ಬಗೆಹರಿಸಿಕೊಳ್ಳುತ್ತೇವೆ ಎಂದು ಕಾಂಗ್ರೆಸ್ ನಾಯಕ ಆಸ್ಕರ್ ಫರ್ನಾಂಡಿಸ್ ಭರವಸೆ ನೀಡಿದರು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ