ಬೆಂಗಳೂರು: ಸಭಾಪತಿ ಶಂಕರಮೂರ್ತಿ ವಿರುದ್ಧ ಅವಿಶ್ವಾಸ ನಿರ್ಣಯ ಕೈಗೊಳ್ಳಲು ಪ್ರಮುಖ ಕಾರಣರಾಗಿದ್ದ ವಿಎಸ್ ಉಗ್ರಪ್ಪ ವಿರುದ್ಧ ಕ್ರಮ ಕೈಗೊಳ್ಳುವಂತೆ ಕಾಂಗ್ರೆಸ್ ನ ಸುಮಾರು 10 ಶಾಸಕರು ಕೆಪಿಸಿಸಿಗೆ ದೂರು ಸಲ್ಲಿಸಿದ್ದಾರೆ.
ಅವಿಶ್ವಾಸ ನಿರ್ಣಯ ಮಂಡಿಸಲು ಹೋಗಿ ಅನವಶ್ಯಕವಾಗಿ ಪಕ್ಷಕ್ಕೆ ಮುಜುಗರ ತಂದಿದ್ದಾರೆ. ಹಾಗೂ ಉಗ್ರಪ್ಪ ಅವರ ನಡೆಯಿಂದಾಗಿ ಬದ್ಧ ವೈರಿಗಳಾಗಿದ್ದ ಜೆಡಿಎಸ್ ಮತ್ತು ಬಿಜೆಪಿ ಒಂದಾಗುವಂತಾಗಿದೆ ಎಂದು ಶಾಸಕರು ದೂರು ನೀಡಿದ್ದಾರೆ.
ಶಾಸಕ ರಾಜಣ್ಣ ಸೇರಿದಂತೆ ಸುಮಾರು 10 ಶಾಸಕರು ಕೆಪಿಸಿಸಿಗೆ ದೂರು ನೀಡಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಈ ಶಾಸಕರು ಬಹಿರಂಗವಾಗಿಯೇ ಉಗ್ರಪ್ಪ ವಿರುದ್ಧ ಹೇಳಿಕೆ ನೀಡಿದ್ದರು.