Webdunia - Bharat's app for daily news and videos

Install App

ಬೀದಿಗಳಲ್ಲಿ ಸಿಂಹದೊಂದಿಗೆ ಸಂಚಾರ ಹೊರಟ ಪ್ರಾಣಿಪ್ರಿಯ

Webdunia
ಶನಿವಾರ, 17 ಜೂನ್ 2017 (12:02 IST)
ಕರಾಚಿ: ಕರಾಚಿ ನಗರದ ಪ್ರಮುಖ ಬೀದಿಗಳಲ್ಲಿ ಸ್ಥಳೀಯ ನಿವಾಸಿ ಸಕ್ಲೇನ್‌ ಜಾವೈದ್ ತಮ್ಮ ಟ್ರಕ್‌ನಲ್ಲಿ ಸಿಂಹದೊಂದಿಗೆ ರಾಜಾರೋಷವಾಗಿ ಸಂಚರಿಸಿದ ವಿಡಿಯೊ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ.
 
ಬಂದರು ನಗರದ ಕರಿಮಾಬಾದ್‌ ಬೀದಿಗಳಲ್ಲಿ ಜನಸಂದಣಿ ಹೆಚ್ಚಿರುವ ಸಂದರ್ಭದಲ್ಲಿ ಟ್ರಕ್ಕಿನ ಹಿಂಭಾಗದಲ್ಲಿ ಈತ ಸಿಂಹವನ್ನು ಕೂರಿಸಿಕೊಂಡು ವಾಹನ ಚಾಲನೆ ಮಾಡುತ್ತಿದ್ದ. ಇದರಿಂದ ಸ್ಥಳೀಯರು ಆಂತಕಕ್ಕೀಡಾಗಿದ್ದಾರೆ.  ಸಾರ್ವಜನಿಕರು ತಮ್ಮ ಸುರಕ್ಷತೆಯ ಬಗ್ಗೆ ಕಳವಳ ವ್ಯಕ್ತಪಡಿಸಿ ಈ ಕುರಿತು ಚಾಲಕನ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾರೆ. ವಿಚಾರಣೆ ನಡೆಸಿದಾಗ ಈ ಪ್ರಾಣಿ ಪ್ರಿಯನ ಬಗ್ಗೆ ಮಾಹಿತಿ ಹೊರಬಂದಿದೆ. 
 
ಸಿಂಹದ ಮಾಲಿಕ ಸಕ್ಲೇನ್‌ ಜಾವೈದ್‌ ತನ್ನ ನಿವಾಸದಲ್ಲಿ ಬೃಹದಾಕಾರ ಬೆಕ್ಕುಗಳನ್ನು ಕೂಡ ಸಾಕಿದ್ದಾನೆ ಅಷ್ಟೇ ಅಲ್ಲ  ಈತನ ಬಳಿ ಖಾಸಗಿ ಮೃಗಾಲಯವೇ ಇರುವುದು ವಿಶೇಷ. ಈತ ಹೇಳುವ ಪ್ರಕಾರ ಸಿಂಹ ಅನಾರೋಗ್ಯದಿಂದ ಬಳಲುತ್ತಿದ ಕಾರಣ ಅದನ್ನು ವೈದ್ಯರ ಬಳಿ ಚಿಕಿತ್ಸೆಗೆ ಕರೆದುಕೊಂಡು ಹೋಗುತ್ತಿದ್ದನಂತೆ. ಅಲ್ಲದೇ ತಮಗೆ ಪ್ರಾಣಿ ಸಾಕಣೆ ಆಸಕ್ತಿಯಿದ್ದು ಸರ್ಕಾರದಿಂದ ಅನುಮತಿ ಪಡೆದ ಖಾಸಗಿ ಮೃಗಾಲಯವೊಂದನ್ನು ಸ್ಥಾಪಿಸಿರುವುದಾಗಿ ತಿಳಿಸಿದ್ದಾನೆ. ಆದರೆ, ಪರವಾನಗಿಯ ಅವಧಿ 2016ರ ಜೂನ್‌ ವೇಳೆ ಮುಕ್ತಯವಾಗಿರುವುದರಿಂದ ಪೊಲೀಸರು ಈತನ ವಿರುದ್ಧ ಎಫ್ ಐಅರ್ ದಾಖಲಿಸಿ ವಶಕ್ಕೆ ಪಡೆದಿದ್ದಾರೆ. 
 

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments