Select Your Language

Notifications

webdunia
webdunia
webdunia
webdunia

ಶುರುವಾಯ್ತು ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಲಾಬಿ: ಎಂ.ಬಿ. ಪಾಟೀಲ್ ದೆಹಲಿಗೆ ದೌಡು

ಶುರುವಾಯ್ತು ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಲಾಬಿ: ಎಂ.ಬಿ. ಪಾಟೀಲ್ ದೆಹಲಿಗೆ ದೌಡು
ಬೆಂಗಳೂರು , ಶುಕ್ರವಾರ, 28 ಏಪ್ರಿಲ್ 2017 (12:27 IST)
ಕಳೆದೊಂದು ವಾರದಿಂದ ಬಿಜೆಪಿಯ ಪಕ್ಷದಲ್ಲಿ ಗದ್ದಲ ಕೋಲಾಹಲ ಕಂಡುಬರುತ್ತಿರುವ ಬೆನ್ನಲ್ಲೇ ಕಾಂಗ್ರೆಸ್`ನಲ್ಲೂ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಲಾಭಿ ಶುರುವಾಗಿದೆ. ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಸಚಿವರಾದ ಡಿ.ಕೆ. ಶಿವಕುಮಾರ್, ಎಂ.ಬಿ. ಪಾಟೀಲ್ ಮತ್ತು ಎಸ್.ಆರ್. ಪಾಟೀಲ್ ನಡುವೆ ಪೈಪೋಟಿ ಎದುರಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.
 

ನಿನ್ನೆಯೇ ದೆಹಲಿ ವಿಮಾನ ಹತ್ತಿರುವ ಎಂ.ಬಿ. ಪಾಟೀಲ್ ಹೈಕಮಾಂಡ್ ಮುಖಂಡರನ್ನ ಭೇಟಿ ಮಾಡಿ ಮಾತುಕತೆ ನಡೆಸಲಿದ್ದಾರೆ. ಅಧ್ಯಕ್ಷ ಸ್ಥಾನಕ್ಕಾಗಿ ಲಾಬಿ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ. ಉತ್ತರ ಕರ್ನಾಟಕಕ್ಕೆ ಅಧ್ಯಕ್ಷ ಸ್ಥಾನ ನೀಡುವುದರಿಂದ ಆಗುವ ಅನುಕೂಲ ಮತ್ತು ಲಿಂಗಾಯತ ಮತಗಳನ್ನ ಸೆಳೆಯುವ ಕುರಿತಂತೆ ಮನವರಿಕೆ ಮಾಡಿಕೊಡಲಿದ್ದಾರೆ ಎನ್ನಲಾಗಿದೆ.

2 ಕ್ಷೇತ್ರಗಳ ಉಪಚುನಾವಣೆ ಬಳಿಕ ಕೆಪಿಸಿಸಿ ಅಧ್ಯಕ್ಷರನ್ನ ಬದಲಾಯಿಸಲಾಗುತ್ತದೆ ಎಂಬ ಮಾತುಗಳು ಕೇಳಿಬರುತ್ತಿದ್ದವು. ಚುನಾವಣೆಯಲ್ಲಿ ಕಾಂಗ್ರೆಸ್ ಜಯ ಗಳಿಸಿದ್ದು, ಮುಂದಿನ ವಿಧಾನಸಬಾ ಚುನಾವಣಾ ದೃಷ್ಟಿಯಿಂದ ಸಮರ್ಥರನ್ನ ಆಯ್ಕೆ ಮಾಡುವ ಹೊಣೆ ಕಾಂಗ್ರೆಸ್ ಮೇಲಿದೆ. ದೇಶದ ವಿವಿಧೆಡೆ ಸೋಲುಂಡಿರುವ ಕಾಂಗ್ರೆಸ್`ಗೆ ರಾಜ್ಯದ ಗೆಲುವು ಟಾನಿಕ್ ನೀಡಿದಂತಾಗಿದೆ. ಹೀಗಾಗಿ, ಬಹಳ ಜಾಗರೂಕತೆಯಿಂದ ಆಯ್ಕೆ ನಡೆಸಬೇಕಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಅಶ್ಲೀಲ ವೆಬ್ ಸೈಟ್`ಗಳಲ್ಲಿ ಮೈಸೂರು ವಿವಿ ವಿದ್ಯಾರ್ಥಿಗಳ ಫೋಟೋ: ತಪ್ಪೊಪ್ಪಿಕೊಂಡ ಟಾಪರ್