Publish Date: Thu, 27 Dec 2018 (17:33 IST)
Updated Date: Thu, 27 Dec 2018 (17:36 IST)
ಮುಂಬರುವ ಲೋಕಸಭೆ ಎಲೆಕ್ಷನ್ ನಲ್ಲಿ ಜೆಡಿಎಸ್ ಪಕ್ಷದ ಜತೆ ಹೊಂದಾಣಿಕೆ ಮಾಡಿಕೊಳ್ಳುವುದು ನಿಶ್ಚಿತ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.
ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ಮುಂಬರಲಿರುವ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ಜೊತೆ ಹೊಂದಾಣಿಕೆ ಮಾಡಿಕೊಳ್ಳುತ್ತೇವೆ. ಜೆಡಿಎಸ್ನವರು ಎಷ್ಟು ಕ್ಷೇತ್ರ ತಮಗೆ ಬೇಕು ಎಂಬುದನ್ನು ಇನ್ನು ತಿಳಿಸಿಲ್ಲ. ಸಭೆಯಲ್ಲಿ ಕುಳಿತು ಚರ್ಚಿಸಿ ಅವರು ಎಷ್ಟು ಕೇಳಬಹುದು, ಎಷ್ಟರಲ್ಲಿ ಅವರು ಗೆಲ್ಲಬಹುದು ಎಂಬುದನ್ನು ಪರಾಮರ್ಶಿಸಿ ಸ್ಥಾನ ಹೊಂದಾಣಿಕೆ ಮಾಡಿಕೊಳ್ಳುತ್ತೇವೆ. ಜೆಡಿಎಸ್ ನೊಂದಿಗೆ ಲೋಕಸಭೆಯಲ್ಲಿ ಹೊಂದಾಣಿಕೆ ಮುರಿದು ಬೀಳುತ್ತದೆ ಎನ್ನುವುದು ತಪ್ಪು ಎಂದು ಅವರು ಹೇಳಿದರು.
ಇನ್ನು ಸಚಿವಸ್ಥಾನದಿಂದ ಕೈಬಿಟ್ಟಿರುವ ರಮೇಶ ಜಾರಕಿಹೊಳಿ ಬೇಸರಗೊಂಡಿದ್ದಾರೆ. ಅವರು ಕಾಂಗ್ರೆಸ್ ನ ವ್ಯಕ್ತಿ. ಅವರು ಪಕ್ಷದಲ್ಲಿಯೇ ಮುಂದುವರೆಯುತ್ತಾರೆ ಎಂಬ ನಂಬಿಕೆ ಇದೆ ಎಂದು ಸಿದ್ದರಾಮಯ್ಯ ಹೇಳಿದರು.
ಸರಕಾರ ಉತ್ತಮವಾಗಿ ಆಡಳಿತ ನೀಡುತ್ತಿದೆ. ನಮ್ಮ ಪಕ್ಷದವರು ಯಾರೂ ಬಿಜೆಪಿಗೆ ಹೋಗುವುದಿಲ್ಲ. ಬಿಜೆಪಿಯ ಕೆಲವು ಶಾಸಕರು ನಮ್ಮ ಸಂಪರ್ಕದಲ್ಲಿದ್ದಾರೆ ಎಂದು ಹೇಳಿದರು.