Select Your Language

Notifications

webdunia
webdunia
webdunia
webdunia

ಕಾಂಗ್ರೆಸ್ ನಾಯಕರಿಗೆ ಸಹಿಸಿಕೊಳ್ಳಲು ಆಗುತ್ತಿಲ್ಲ: ಯಡಿಯೂರಪ್ಪ

ಕಾಂಗ್ರೆಸ್ ನಾಯಕರಿಗೆ ಸಹಿಸಿಕೊಳ್ಳಲು ಆಗುತ್ತಿಲ್ಲ: ಯಡಿಯೂರಪ್ಪ
ಬಾಗಲಕೋಟೆ , ಸೋಮವಾರ, 22 ಮೇ 2017 (18:27 IST)
ದಲಿತ ಕೇರಿಗೆ ತೆರಳಿ ಅಲ್ಲಿನ ಸಮಸ್ಯೆಗಳತ್ತ ಗಮನಹರಿಸಿ ಉಪಹಾರ ಸೇವಿಸುತ್ತಿರುವುದು ಕಾಂಗ್ರೆಸ್ ನಾಯಕರಿಗೆ ಸಹಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ತಿರುಗೇಟು ನೀಡಿದ್ದಾರೆ.
 
ದಲಿತರ ಸಮಸ್ಯೆಗಳನ್ನು ಅರಿತು ಪರಿಹಾರ ಮಾಡುವುದು, ಅಲ್ಲಿನ ಜನರ ಕಷ್ಟ ಸುಖ ಆಲಿಸಿದ್ದೇನೆ. ಪ್ರತಿಯೊಂದು ಜಿಲ್ಲೆಗೆ ಪ್ರವಾಸ ಮಾಡಿದಾಗ  ಅಲ್ಲಿನ ದಲಿತ ಕೇರಿಗೆ ಭೇಟಿ ನೀಡಬೇಕು ಎಂದು ಕೊಂಡಿರುವುದಾಗಿ ತಿಳಿಸಿದ್ದಾರೆ.
 
ಗೋವಿಂದ್ ಕಾರಜೋಳ್, ಶೋಭಾ ಕರಂದ್ಲಾಜೆ ಮತ್ತು ರಾಷ್ಟ್ರೀಯ ಕಾರ್ಯದರ್ಶಿ ಮುರಳಿಧರ್ ರಾವ್ ಸಾಥ್ ನೀಡಿದ್ದಾರೆ. ದಲಿತರು ಬಿಜೆಪಿಯತ್ತ ಆಕರ್ಷಿತರಾಗುತ್ತಿರುವುದು ಕಾಂಗ್ರೆಸ್‌ ಪಕ್ಷಕ್ಕೆ ನುಂಗಲಾರದ ತುತ್ತಾಗಿದೆ ಎಂದು ಲೇವಡಿ ಮಾಡಿದರು.
 
ದಲಿತರನ್ನು ಕಾಂಗ್ರೆಸ್ ಪಕ್ಷದವರಂತೆ ವೋಟ್‌ಬ್ಯಾಂಕ್‌ಗಾಗಿ ಓಲೈಸುತ್ತಿಲ್ಲ.ದಲಿತರ ಸಮಸ್ಯೆಗಳಿಗೆ ಬಿಜೆಪಿ ಶ್ರಮಿಸಲು ಸಿದ್ದವಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಬೆಂಗಳೂರಿನಲ್ಲಿ ಕಸ ಗುಡಿಸಲು ರಸ್ತೆಗಿಳಿದಿದೆ ಮೆಕ್ಯಾನಿಕಲ್ ಸ್ವೀಪಿಂಗ್ ಯಂತ್ರ