ನಟಿ ರಮ್ಯಾ ಪಾಕಿಸ್ತಾನದ ಪರವಾಗಿ ಮಾತನ್ನಾಡಿರುವುದು ಆಶ್ಚರ್ಯ ತರಿಸುವಂತದ್ದಲ್ಲ. ವಾಸ್ತವವಾಗಿ ಕಾಂಗ್ರೆಸ್‌ನವರಿಗೆ ಪಾಕಿಸ್ತಾನವನ್ನು ಹೊಗಳುವ ಹವ್ಯಾಸ ಮೊದಲಿನಿಂದಲೂ ಇದೆ ಎಂದು ಬಿಜೆಪಿ ನಾಯಕ ಎಸ್. ಪ್ರಕಾಶ್ ವ್ಯಂಗ್ಯವಾಡಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾಜಿ ಸಂಸದೆ, ನಟಿ ರಮ್ಯಾ ಅವರು ಹೇಳಿರುವ ಮಾತನ್ನು ನಿರ್ಲಕ್ಷಿಸಬೇಕಿದೆ. ಅವರು ಯಾವ ಆಯಾಮದಲ್ಲಿ ಈ ಹೇಳಿಕೆಯನ್ನು ನೀಡಿದ್ದಾರೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕಿದೆ. ಅನಗತ್ಯವಾಗಿ ಅವರಿಗೆ ನಾವೇ ಪ್ರಚಾರ ನೀಡಿದಂತಾಗುತ್ತಿದೆ ಎಂದು ಹೇಳಿದ್ದಾರೆ.
ಪಾಕಿಸ್ತಾನದ ಪರವಾಗಿ ಹೇಳಿಕೆ ನೀಡಿರುವ ರಮ್ಯಾ ಅವರು, ಪಾಕ್ ಕುರಿತು ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಅವರ ಹೇಳಿಕೆ ಸರಿಯಲ್ಲ. ಪಾಕಿಸ್ತಾನ ನರಕವಲ್ಲ, ಪಾಕಿಸ್ತಾನದ ಜನತೆ ಒಳ್ಳೆಯವರೆಂದು ಹೇಳಿದ್ದರು. ಈ ಹೇಳಿಕೆಗೆ ಸಾಕಷ್ಟು ವಿರೋಧಗಳು ವ್ಯಕ್ತವಾಗುತ್ತಿದ್ದು, ರಮ್ಯಾ ವಿರುದ್ಧ ಹಲವು ಪ್ರತಿಭಟನೆಗಳು ನಡೆಯುತ್ತಿದೆ.
ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ