Select Your Language

Notifications

webdunia
webdunia
webdunia
webdunia

ಪ್ರಧಾನಿ ಮೋದಿಯನ್ನು ನಾಯಿಮರಿಗೆ ಹೋಲಿಸಿದ ಮಾಜಿ ಸಂಸದ ಎಚ್.ವಿಶ್ವನಾಥ್

ಪ್ರಧಾನಿ ಮೋದಿ
ಮೈಸೂರು , ಗುರುವಾರ, 24 ನವೆಂಬರ್ 2016 (13:52 IST)
ಎತ್ತಿನ ಬಂಡಿಯ ನೆರಳಲ್ಲಿ ಬರುತ್ತಿರುವ ನಾಯಿಮರಿ ನಾನೇ ಬಂಡಿಯನ್ನು ಎಳೆಯುತ್ತಿದ್ದೇನೆ ಎನ್ನುವ ಭ್ರಮೆಯಲ್ಲಿರುತ್ತದೆ. ಆದರೆ, ಎತ್ತಿನ ಬಂಡಿಯ ನೆರಳಲ್ಲಿ ನಡೆಯುತ್ತಿದ್ದೇನೆ ಎನ್ನುವ ಅರಿವಿರುವುದಿಲ್ಲ. ಅದರಂತೆ ನೋಟ್ ಬ್ಯಾನ್ ಮಾಡಿದ ಪ್ರಧಾನಿ ಮೋದಿ ಪರಿಸ್ಥಿತಿಯ ಇದೇ ರೀತಿಯಾಗಿದೆ ಎಂದು ಕಾಂಗ್ರೆಸ್ ಮುಖಂಡ ಮಾಜಿ ಸಂಸದ ಎಚ್.ವಿಶ್ವನಾಥ್ ಲೇವಡಿ ಮಾಡಿದ್ದಾರೆ.

ನೋಟ್ ಬ್ಯಾನ್ ನಿಷೇಧ ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಯಾರೋ ಎಳೆದ ಗಾಡಿಯನ್ನು ತಾನು ಎಳೆಯುತ್ತಿದ್ದೇನೆ ಎನ್ನುವ ಭ್ರಮೆ ಮೋದಿ ಹೊಂದಿದ್ದಾರೆ. ಮೊದಲು ಮೋದಿ ಭ್ರಮೆಯಿಂದ ಹೊರಬರಲಿ. ಭಾರತದಲ್ಲಿ ಕ್ಯಾಶ್‌ಲೆಸ್ ವ್ಯವಸ್ಥೆ ಸರಿಯಾಗುತ್ತದೆಯೇ? ಎಂದು ಪ್ರಶ್ನಿಸಿದರು.
 
ನೋಟ್ ಬ್ಯಾನ್ ಜಾರಿಗೊಳಿಸಿದ್ದರಿಂದ ಸಣ್ಣ ವ್ಯಾಪಾರಿಗಳು, ಕಾರ್ಮಿಕರು, ಕೂಲಿಕಾರರು, ಖಾಸಗಿ ಸಂಸ್ಥೆಗಳ ನೌಕರರು ಸೇರಿದಂತೆ ಬಹುತೇಕ ವರ್ಗದವರಿಗೆ ತೊಂದರೆಯಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
 
ನೋಟು ನಿಷೇಧದಿಂದಾಗಿ ಹಲವಾರು ಜನರು ಎಟಿಎಂ ಕ್ಯೂಗಳಲ್ಲಿ ನಿಂತು ಪ್ರಾಣ ಕಳೆದುಕೊಂಡಿದ್ದಾರೆ. ಅವರ ಜೀವಗಳಿಗೆ ಬೆಲೆಯಿಲ್ಲವೇ? ಅವರ ಜೀವವನ್ನು ಯಾರು ಕೊಡ್ತಾರೆ ಎಂದು ಮಾಜಿ ಸಂಸದ ಎಚ್.ವಿಶ್ವನಾಥ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಯಾರೂ ಶೆಟ್ಟರ್, ಈಶ್ವರಪ್ಪ, ಯಡಿಯೂರಪ್ಪ ನಂಬಬೇಡಿ: ಸಿಎಂ ಸಿದ್ದರಾಮಯ್ಯ