Select Your Language

Notifications

webdunia
webdunia
webdunia
webdunia

ಬಿಜೆಪಿಗಿಂತ ದೊಡ್ಡ ಕೋಮುವಾದಿ ಕಾಂಗ್ರೆಸ್: ಮಧು ಬಂಗಾರಪ್ಪ

ಬಿಜೆಪಿಗಿಂತ ದೊಡ್ಡ ಕೋಮುವಾದಿ ಕಾಂಗ್ರೆಸ್: ಮಧು ಬಂಗಾರಪ್ಪ
ಬೆಂಗಳೂರು , ಶನಿವಾರ, 4 ಮಾರ್ಚ್ 2017 (16:25 IST)
ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಪಕ್ಷ ಬಿಜೆಪಿಗಿಂತ ದೊಡ್ಡ ಕೋಮುವಾದಿಯಾಗಿದೆ ಎಂದು ಜೆಡಿಎಸ್ ಶಾಸಕ ಮಧು ಬಂಗಾರಪ್ಪ ವಾಗ್ದಾಳಿ ನಡೆಸಿದ್ದಾರೆ.
 
ಕುಮಾರ್ ಬಂಗಾರಪ್ಪ ಬಿಜೆಪಿ ಸೇರ್ಪಡೆ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಇತರ ಪಕ್ಷಗಳಲ್ಲಿ ನೆಲೆಯಿಲ್ಲದವರು ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾಗುತ್ತಿದ್ದಾರೆ. ಜನಬೆಂಬಲವಿರುವ ಯಾವೊಬ್ಬ ಶಾಸಕ ಕೂಡಾ ಬಿಜೆಪಿಗೆ ಸೇರ್ಪಡೆಯಾಗುತ್ತಿಲ್ಲ ಎಂದು ಲೇವಡಿ ಮಾಡಿದರು.
 
ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರಿಗೆ ಅಧಿಕಾರದ ದಾಹವಿದೆ. ಆದ್ದರಿಂದಲೇ ಯಾರೇ ಪಕ್ಷಕ್ಕೆ ಬಂದರೂ ಸ್ವಾಗತಿಸುತ್ತಿದ್ದಾರೆ. ಹೇಗಾದರೂ ಮಾಡಿ ಅಧಿಕಾರಕ್ಕೆ ಬರಬೇಕು ಎನ್ನುವುದೇ ಅವರ ಕನಸಾಗಿದೆ ಎಂದು ವ್ಯಂಗ್ಯವಾಡಿದರು.
 
ಬಿಜೆಪಿ ಆರೋಪಗಳಿಂದಾಗಿ ಸ್ಟೀಲ್ ಬ್ರಿಡ್ಜ್ ಯೋಜನೆಯನ್ನು ಕೈಬಿಟ್ಟ ಕಾಂಗ್ರೆಸ್ ಸರಕಾರ ವಿಪಕ್ಷಗಳ ಆರೋಪವನ್ನು ಒಪ್ಪಿಕೊಂಡಂತಾಗಿದೆ. ಡೈರಿಯ ಬಗ್ಗೆ ಸಿಬಿಐ ತನಿಖೆ ನಡೆದಲ್ಲಿ ಸತ್ಯ ಸಂಗತಿ ಹೊರಬರುತ್ತದೆ ಎಂದು ಜೆಡಿಎಸ್ ಶಾಸಕ ಮಧು ಬಂಗಾರಪ್ಪ ತಿಳಿಸಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಅಬ್ ಕಿ ಬಾರ್ ಯಡಿಯೂರಪ್ಪ ಸರಕಾರ: ಸಿ.ಟಿ.ರವಿ ಘೋಷಣೆ