ಏನಾರಾ ಮಾಡ್ಕೊಳ್ಳಿ, ನಾವೇನೂ ಮಾಡಕ್ಕಾಗಲ್ಲ ಎಂದಿತಾ ಕಾಂಗ್ರೆಸ್ ಹೈಕಮಾಂಡ್

Krishnaveni K
ಮಂಗಳವಾರ, 23 ಡಿಸೆಂಬರ್ 2025 (09:41 IST)
ಬೆಂಗಳೂರು: ಏನಾದರೂ ಮಾಡ್ಕೊಳ್ಳಿ, ನಾವೇನೂ ಮಾಡಕ್ಕಾಗಲ್ಲ ಎಂದು ರಾಜ್ಯ ನಾಯಕರಿಗೆ ಕಾಂಗ್ರೆಸ್ ಹೈಕಮಾಂಡ್ ಹೇಳಿತಾ ಎನ್ನುವ ಸಂಶಯ ಮೂಡಿದೆ.

ರಾಜ್ಯದಲ್ಲಿ ಸಿಎಂ ಕುರ್ಚಿಗಾಗಿ ಸಿದ್ದರಾಮಯ್ಯ ಮತ್ತು ಡಿಕೆಶಿ ಬಣದ ನಡುವೆ ಒಳಗೊಳಗೇ ಕಿತ್ತಾಟ ನಡೆಯುತ್ತಿದೆ. ಮಾಧ್ಯಮಗಳ ಮುಂದೆ ಎಲ್ಲಾ ಚೆನ್ನಾಗಿದೆ ಎಂದು ಹೇಳಿಕೊಂಡರೂ ಒಳಗೊಳಗೇ ಉಭಯ ನಾಯಕರ ಬಣ ರಾಜಕೀಯ ಗುಟ್ಟಾಗೇನೂ ಉಳಿದಿಲ್ಲ.

ಇದರ ನಡುವೆ ಹೈಕಮಾಂಡ್ ಮಾತ್ರ ರಾಜ್ಯದ ಸಿಎಂ ಗೊಂದಲ ಬಗೆಹರಿಸುವ ಆಸಕ್ತಿಯೇ ಇಟ್ಟುಕೊಂಡಿಲ್ಲ ಎನಿಸುತ್ತಿದೆ. ಮೊನ್ನೆಯೇ ಮಲ್ಲಿಕಾರ್ಜುನ ಖರ್ಗೆ ನಾಯಕತ್ವ ಸಮಸ್ಯೆ ನಾವು ತಂದಿದ್ದಲ್ಲ. ರಾಜ್ಯ ನಾಯಕರೇ ತಂದುಕೊಂಡಿದ್ದು. ಅವರೇ ಬಗೆಹರಿಸುತ್ತಾರೆ ಎಂದಿದ್ದರು.

ಇತ್ತ ಸಂಸತ್ ಅಧಿವೇಶನದ ಬಳಿಕವಾದರೂ ರಾಜ್ಯ ನಾಯಕರಿಗೆ ಬುಲಾವ್ ಬರಬಹುದು ಎಂದು ಲೆಕ್ಕಾಚಾರ ಹಾಕಲಾಗಿತ್ತು. ಆದರೆ ಈಗಲೂ ಹೈಕಮಾಂಡ್ ಮಾತ್ರ ತಮಗೂ ಇದಕ್ಕೂ ಸಂಬಂಧವೇ ಇಲ್ಲದಂತೆ ಸೈಲೆಂಟ್ ಆಗಿದೆ. ಇತ್ತ ಖರ್ಗೆ ಮೊನ್ನೆ ನೀಡಿದ ಸಂದೇಶ ಗಮನಿಸಿದರೆ ಹೈಕಮಾಂಡ್ ಸಿಎಂ ಕಿತ್ತಾಟ ಸಮಸ್ಯೆಯನ್ನು ಬಗೆಹರಿಸುವ ಆಸಕ್ತಿಯೇ ಇಲ್ಲದೆ ಕೈ ತೊಳೆದುಕೊಂಡಿದೆಯೇನೋ ಅನಿಸುತ್ತಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಭಾರತ ನನ್ನನ್ನು ಖುಷಿಯಾಗಿಡಬೇಕು, ಅದು ಅವರಿಗೂ ಒಳ್ಳೆಯದು: ಡೊನಾಲ್ಡ್ ಟ್ರಂಪ್ ಹೊಸ ಬೆದರಿಕೆ

ಅಬ್ಬಾ ಎಂಥಾ ಧೈರ್ಯ ಈ ನಾಯಿಗೆ: ಗೆಳೆಯನಿಗಾಗಿ ಏನು ಮಾಡ್ತು ನೋಡಿ Video

Karnataka Weather: ಈ ವಾರದ ಹವಾಮಾನದಲ್ಲಿ ಭಾರೀ ಬದಲಾವಣೆ, ಈ ಎಚ್ಚರಿಕೆ ಗಮನಿಸಿ

ತ್ರಿಪುರಾ: ವಿವಿಧೆಡೆ ₹100 ಕೋಟಿ ಮೌಲ್ಯದ ಗಾಂಜಾ ಗಿಡಗಳು ನಾಶ

ಬಳ್ಳಾರಿ ಘರ್ಷಣೆ, ಬಿಗ್‌ ಅಪ್ಡೇಟ್ ಕೊಟ್ಟ ಜಿ ಪರಮೇಶ್ವರ್‌

ಮುಂದಿನ ಸುದ್ದಿ
Show comments