ರಾಹುಲ್ ಗಾಂಧಿ ವಂದೇ ಮಾತರಂ ಗೀತೆಗೆ ಅಪಮಾನ ಮಾಡಿದ್ದಾರೆ ಎಂದು ಧಾರವಾಡ ಜಿಲ್ಲೆಯ ಅಣ್ಣಿಗೇರಿ ಪಟ್ಟಣದಲ್ಲಿ ಸ್ಮೃತಿ ಇರಾನಿ ಹೇಳಿಕೆ ನೀಡಿದ್ದಾರೆ.
ರಾಹುಲ್ ಗಾಂಧಿ ಕಾಂಗ್ರೆಸ್ ಅಧ್ಯಕ್ಷನಾಗಿ ಮಾಡಿದ್ದು ಸರಿಯಲ್ಲ. ಹೀಗಾಗಿ ಅವರಿಗೆ ಕರ್ನಾಟಕದ ಜನತೆ ತಕ್ಕ ಪಾಠ ಕಲಿಸಲಿದ್ದಾರೆ.ರಾಜ್ಯದಲ್ಲಿ ಸಿದ್ದರಾಮಯ್ಯ ಜಾತಿ ಜಾತಿಗಳ ನಡುವೆ ಒಡೆದು ಆಳುತ್ತಿದ್ದಾರೆ.
ಸ್ಟೀಲ್ ಬ್ರಿಡ್ಜ್ ನಿರ್ಮಾಣದ ಹೆಸರಲ್ಲಿ ಜನರ ಹಣ ಹೊಡೆಯಲು ಸಿಎಂ ಮುಂದಾಗಿದ್ದರು ಆದರೆ ಅದು ಸಾಧ್ಯವಾಗಲಿಲ್ಲ ಎಂದು ಲೇವಡಿ ಮಾಡಿದರು.
ರಾಜ್ಯದಲ್ಲಿ ಐಐಎಸ್ ಮಹಿಳಾ ಆಫಿಸರ್ ಗೆ ಅವಮಾನ ಮಾಡಲಾಗುತ್ತಿದೆ. ಅನುಪಮಾ ಶೈಣೈ ಗೆ ಕೂಡ ಅಪಮಾನ ಮಾಡಿದ್ದಾರೆ. ಇಂತಹವರಿಂದ ರಾಜ್ಯದ ರಕ್ಷಣೆ ಹೇಗೆ ಸಾಧ್ಯ? ಎಂದು ಪ್ರಶ್ನಿಸಿದರು. ಪೊಲೀಸರಿಗೆ ಗೌರವ ಸಿಗುತ್ತಿಲ್ಲ.ಇನ್ನು ಸಾಮಾನ್ಯ ಮಹಿಳೆಗೆ ಹೇಗೆ ರಕ್ಷಣೆ ಸಿಗುತ್ತೆ?ನೀವೇ ಯೋಚನೆ ಮಾಡಿ ಮತದಾನ ಮಾಡಿ.
2014 ಚುನಾವಣೆಯಲ್ಲಿ ಮೋದಿ ಅವರಿಗೆ ಚಾಯ್ ವಾಲಾ ಅಂತಾ ಅಪಮಾನ ಮಾಡಿದ್ದರು. ಚಾಯ್ ವಾಲಾ ಅದ್ಹೇಗೆ ಪ್ರಧಾನಿ ಆಗುತ್ತಾನೆ ಅಂತಾ ಲೇವಡಿ ಮಾಡಿದರು. ಆದ್ರೆ ದೇಶದ ಜನರು ಮೋದಿ ಅವರಿಗೆ ಆಶೀರ್ವಾದ ಮಾಡಿ ಪ್ರಧಾನಿ ಮಾಡಿದರು.
ಮೋದಿಯವರು ದೇಶದ ಬಡ ಜನರಿಗೆ ಜನಧನ್ ಯೋಜನೆ ಮೂಲಕ ಬ್ಯಾಂಕ್ ಖಾತೆ ಮಾಡಿಕೊಟ್ಟರು. ಇದರ ಮೂಲಕ ಸರ್ಕಾರದ ಯೋಜನೆಗಳ ಅನುದಾನ ಹಣ ನೇರವಾಗಿ ಖಾತೆಗೆ ಜಮಾ ಆಗುತ್ತಿದೆ. ಆದ್ರೆ ಕೇಂದ್ರದ ಹಣ ಇಂದು ರಾಜ್ಯದ ಜನತೆಗೆ ಸಿಗುತ್ತಿಲ್ಲ. ಯಾಕೆಂದರೆ ಕೇಂದ್ರದ ಹಣ ರಾಜ್ಯ ಸರ್ಕಾರದ ಸರಿಯಾಗಿ ಬಳಕೆ ಆಗುತ್ತಿಲ್ಲ. ಸಿಎಂ ಗೆ ಸಿದ್ದ ರೂಪಯ್ಯ ಅಂತಾ ಸ್ಮೃತಿ ಇರಾನಿ. ಲೇವಡಿ ಮಾಡಿದ್ದಾರೆ.