Select Your Language

Notifications

webdunia
webdunia
webdunia
webdunia

ಮೋದಿ ಪರ ಜೈಕಾರ, ಪದ್ಮಾವತಿ ರಮ್ಯಾಗೆ ಮುಜುಗರ....

ಮೋದಿ ಪರ ಜೈಕಾರ, ಪದ್ಮಾವತಿ ರಮ್ಯಾಗೆ ಮುಜುಗರ....
ಮಂಡ್ಯ , ಶುಕ್ರವಾರ, 18 ನವೆಂಬರ್ 2016 (16:39 IST)
ದೇಶಾದ್ಯಂತ 500, 1000 ನೋಟು ಬ್ಯಾನ್ ಹಿನ್ನೆಲೆಯಲ್ಲಿ ಇಂದು ಮಾಜಿ ಸಂಸದೆ ಹಾಗೂ ನಟಿ ರಮ್ಯಾ ಮಂಡ್ಯದ ಮಾರುಕಟ್ಟೆಗೆ ಭೇಟಿ ನೀಡಿ, ಪರಿಶೀಲನೆ ನಡೆಸಿದರು.
 
ಕಾವೇರಿ ನದಿ ನೀರು ಹಂಚಿಕೆ ವಿವಾದದಲ್ಲಿ ಮಾಜಿ ಸಂಸದೆ ರಮ್ಯಾ ಭಾಗಿಯಾಗದಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದ ಸ್ಥಳೀಯರು, ಪ್ರಧಾನಿ ನರೇಂದ್ರ ಮೋದಿ ಅವರಿಗೆ ಜೈಕಾರ ಕೂಗಿ ರಮ್ಯಾ ಅವರಿಗೆ ಮುಜುಗರ ಉಂಟಾಗುವಂತೆ ಮಾಡಿದ ಘಟನೆ ನಡೆಯಿತು.
 
ತನ್ನ ಆಗಮನದ ವೇಳೆ ಸ್ಥಳೀಯರು ಮೋದಿ ಅವರ ಪರವಾಗಿ ಘೋಷಣೆ ಕೂಗಿರುವುದಕ್ಕೆ ಕೆಂಡಾಮಂಡಲವಾದ ರಮ್ಯಾ, ಸ್ಥಳೀಯರೊಂದಿಗೆ ವಾಗ್ವಾದಕ್ಕಿಳಿದರು ಎಂದು ಹೇಳಲಾಗುತ್ತಿದೆ.
 
ಮಾಜಿ ಸಂಸದೆಯಾಗಿರುವ ರಮ್ಯಾ ಕಾವೇರಿ ನದಿ ನೀರು ಹಂಚಿಕೆ ವಿವಾದದಲ್ಲಿ ಭಾಗಿಯಾಗದಿರುವುದು ಹಾಗೂ ಅವಹೇಳನಕಾರಿ ಹೇಳಿಕೆ ನೀಡಿರುವುದನ್ನು ಖಂಡಿಸಿ ಸ್ಥಳೀಯರು ರಮ್ಯಾ ಆಗಮನಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ ಎಂದು ಹೇಳಲಾಗುತ್ತಿದೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಪತಿಯ ಮನೆಗೆ ಬೆಂಕಿ ಹಚ್ಚಿ ಪ್ರಿಯಕರನೊಂದಿಗೆ ಪರಾರಿಯಾದ ಪತ್ನಿ