Publish Date: Thu, 05 Jan 2017 (09:14 IST)
Updated Date: Thu, 05 Jan 2017 (09:16 IST)
ಸಂಗಾತಿಯನ್ನು ಡ್ರಾಪ್ ಮಾಡಲು ಬಂದಿದ್ದ ಯುವಕನ ಮೇಲೆ ಕಾಂಗ್ರೆಸ್ ಕಾರ್ಪೋರೇಟರ್ ಹಲ್ಲೆ ನಡೆಸುವ ಮೂಲಕ ಅಟ್ಟಹಾಸ ಮೆರೆದ ಘಟನೆ ಬೆಂಗಳೂರಿನ ಬಾಣಸವಾಡಿಯಲ್ಲಿ ವರದಿಯಾಗಿದೆ.
ಹೆಣ್ಣೂರಿನ ಗಿರಿ ಎಂಬುವವರು ನಿನ್ನೆ ರಾತ್ರಿ ಸಂಗಾತಿಯನ್ನು ಡ್ರಾಪ್ ಮಾಡಲು ಬಾಣಸವಾಡಿಗೆ ಬಂದಿದ್ದರು. ಗಿರಿ ಹಾಗೂ ಆತನ ಸಂಗಾತಿ ಆತ್ಮೀಯವಾಗಿ ಮಾತನಾಡುತ್ತಿರುವುದನ್ನು ಕಂಡ ಕಾಂಗ್ರೆಸ್ ಕಾರ್ಪೋರೇಟರ್ ಆನಂದ್, ಅವಾಚ್ಯ ಶಬ್ದಗಳಿಂದ ನಿಂದಿಸಿ ತನ್ನ ಮೊಬೈಲ್ ಪೋನ್‌ನಲ್ಲಿ ವಿಡಿಯೋ ಚಿತ್ರೀಕರಣ ಮಾಡಲು ಮುಂದಾಗಿದ್ದಾನೆ. ಚಿತ್ರೀಕರಣಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಗಿರಿಯ ಮೇಲೆ ಕುಡಿದು ತೂರಾಡುತ್ತಿದ್ದ ಕಾರ್ಪೋರೇಟರ್, ಆತನ ಮಗ ಹಾಗೂ ಸಹಚರರು ಸೇರೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ.
ಈ ಕುರಿತು ಹೆಣ್ಣೂರಿನ ಗಿರಿ ಬಾಣಸವಾಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಹೊಸ ವರ್ಷಾಚರಣೆ ಸಂದರ್ಭದಲ್ಲಿ ಮಹಿಳೆಯರ ಮೇಲೆ ನಡೆದ ಲೈಂಗಿಕ ದೌರ್ಜನ್ಯ ಮತ್ತು ಕಮ್ಮನಹಳ್ಳಿಯಲ್ಲಿ ಯುವತಿಯನ್ನು ನಡುರಸ್ತೆಯಲ್ಲಿಯೇ ಅಡ್ಡಗಟ್ಟಿ ಲೈಂಗಿಕ ದೌರ್ಜನ್ಯ ಎಸಗಿದ ಪ್ರಕರಣದ ಬೆನ್ನಲ್ಲೇ ಇಂತಹ ಹೇಯ ಕೃತ್ಯ ನಡೆದದ್ದು, ರಾಜಧಾನಿ ಬೆಂಗಳೂರು ಯುವತಿಯರು ಹಾಗೂ ಪ್ರೇಮಿಗಳಿಗೆ ಸೇಫ್ ಅಲ್ಲ ಎಂದು ಮತ್ತೊಮ್ಮೆ ಸಾಬೀತಾಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ