Publish Date: Fri, 28 Jul 2017 (14:16 IST)
Updated Date: Fri, 28 Jul 2017 (14:26 IST)
ಆಪ್ತ ಸಹಾಯಕ ವಿನಯ್ ಅಪಹರಣ ಪ್ರಕರಣದಲ್ಲಿ ಕಾಂಗ್ರೆಸ್ ಷಡ್ಯಂತ್ರ ನಡೆಸುತ್ತಿದೆ ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ ಆರೋಪಿಸಿದ್ದಾರೆ.
ವಿನಯ್ ಮತ್ತು ಸಂತೋಷ್ ಸ್ನೇಹಿತರು. ಆದರೆ, ಇದೀಗ ಅವರಲ್ಲಿ ಸ್ವಲ್ಪ ಗೊಂದಲ ಏರ್ಪಟ್ಟಿದೆ. ಕಿಡ್ನಾಪ್ ಪ್ರಕರಣ ಕೋರ್ಟ್‌ನಲ್ಲಿ ಬಗೆಹರಿಯಲಿದೆ ಎಂದು ತಿಳಿಸಿದ್ದಾರೆ.
ನನ್ನ ಮತ್ತು ಯಡಿಯೂರಪ್ಪನವರ ಮಧ್ಯೆಯೂ ಭಿನ್ನಮತವಿತ್ತು. ಆದರೆ, ಸಂಘ ಪರಿವಾರ ನಮ್ಮಲ್ಲಿನ ಬಿಕ್ಕಟ್ಟು ಬಗೆಹರಿಸಿದ್ದರಿಂದ ಇದೀಗ ನಾವಿಬ್ಬರು ಅಣ್ಣತಮ್ಮಂದಿರಂತಿದ್ದೇವೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.
ವಿನಯ್ ನನ್ನ ಅಧಿಕೃತ ಪಿಎ ಅಲ್ಲ, ಸಂತೋಷ್ ಕೂಡಾ ಯಡಿಯೂರಪ್ಪನವರ ಅಧಿಕೃತ ಪಿಎ ಅಲ್ಲ. ಇವರಿಬ್ಬರನ್ನು ಬಳಸಿಕೊಂಡು ಕಾಂಗ್ರೆಸ್ ಷಡ್ಯಂತ್ರ ನಡೆಸುತ್ತಿದೆ ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ ತಿಳಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.