ಬೆಂಗಳೂರು: ಮೊಣಕಾಲು ನೋವಿನ ಕಾರಣಕ್ಕೆ ಸಿಎಂ ಸಿದ್ದರಾಮಯ್ಯ ಅವರು ಇನ್ವೆಸ್ಟ್ ಕರ್ನಾಟಕ 2025 ಉದ್ಘಾಟನಾ ಸಮಾರಂಭಕ್ಕೆ ಗಾಲಿ ಕುರ್ಚಿಯಲ್ಲಿ ಆಗಮಿಸಿದ್ದರು. ಈ ವೇಳೆ ಸಿಎಂ ಜತೆ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ನಡೆದುಕೊಂಡ ರೀತಿ ಭಾರೀ ಮೆಚ್ಚುಗೆಗೆ ಪಾತ್ರವಾಗಿದೆ.
ಕೇಂದ್ರ ಸಚಿವರನ್ನು ಸ್ವಾಗತಿಸಲು ಗಾಲಿ ಕುರ್ಚಿಯಿಂದ ಎದ್ದೇಳಲು ಹೋದ ಸಿದ್ದರಾಮಯ್ಯ ಅವರನ್ನು ರಾಜನಾಥ್ ಅವರು ಬೇಡ ಎಂದು ಹೇಳಿ ಅವರೇ ವಾಪಾಸ್ ಚೇರ್‌ನಲ್ಲಿ ಕೂರಿಸಿದ್ದಾರೆ. ಅದಲ್ಲದೆ ಅವರ ಆರೋಗ್ಯವನ್ನು ವಿಚಾರಿಸಿದ್ದಾರೆ.
ಅಷ್ಟೇ ಅಲ್ಲದೆ ಕಾರ್ಯಕ್ರಮ ನಂತರ ಗಾಲಿ ಕುರ್ಚಿಯಲ್ಲಿದ್ದ ಸಿದ್ದರಾಮಯ್ಯ ಅವರ ಕೈಯನ್ನೇ ಹಿಡಿಯುತ್ತ ರಾಜನಾಥ್ ಸಿಂಗ್ ಅವರು ಹೊರನಡೆದರು. ಸದ್ಯ ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ವೈರಲ್ ಆಗಿದೆ. ಇಬ್ಬರೂ ಪ್ರಬುದ್ಧ ರಾಜಕಾರಣಿಗಳ ಆತ್ಮೀಯ ಭೇಟಿಯ ಕ್ಷಣಗಳನ್ನು ಕೊಂಡಾಡುತ್ತಿದ್ದಾರೆ.
ಇಬ್ಬರ ಸೈದ್ಧಾಂತಿಕ ವಿಚಾರಧಾರೆಗಳು ಬೇರೆ ಬೇರೆಯಾಗಿರಬಹುದು. ಆದರೆ ಅವರಲ್ಲಿರುವ ಮಾನವೀಯ ಮೌಲ್ಯ ಇಂದು ಎಲ್ಲರ ಮೆಚ್ಚುಗೆ ಪಾತ್ರವಾಗಿದೆ.
ಈ ವಿಡಿಯೋವನ್ನು ಕಾಂಗ್ರೆಸ್ ಹಾಗೂ ಬಿಜೆಪಿ ನಾಯಕರು ತಮ್ಮ ಎಕ್ಸ್ ಖಾತೆಯಲ್ಲಿ ಶೇರ್ ಮಾಡುತ್ತಿದ್ದಾರೆ.
ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು ಈ ವಿಡಿಯೋವನ್ನು ತಮ್ಮ ಎಕ್ಸ್ ಖಾತೆಯಲ್ಲಿ ಶೇರ್ ಮಾಡಿ ಬರೆದುಕೊಂಡಿದ್ದಾರೆ. ರಕ್ಷಣಾ ಸಚಿವರಾದ ರಾಜನಾಥ್ ಸಿಂಗ್ ಅವರ ಅನುಕರಣೀಯ ನಡುವಳಿಕೆಯನ್ನು ನೋಡಿ ಹೃದಯಸ್ಪರ್ಶವಾಯಿತು.