Webdunia - Bharat's app for daily news and videos

Install App

ಹಾಸನ ಟಿಕೆಟ್ ನಂತರ ದೇವನಹಳ್ಳಿಯಲ್ಲಿ ಶುರುವಾಯ್ತು ಗೊಂದಲ.!

Webdunia
ಬುಧವಾರ, 8 ಫೆಬ್ರವರಿ 2023 (20:41 IST)
ಮುಂಬರುವ ವಿಧಾನಸಭಾ ಚುನಾವಣೆಗೆ ಪ್ರಾದೇಶಿಕ ಪಕ್ಷವನ್ನ ಅಸ್ತಿತ್ವಕ್ಕೆ ತರಬೇಕಂತಾ ದಳಪತಿಗಳು ಸಾಕಷ್ಟು ಚಕ್ರವ್ಯೂಹ ರಚನೆ ಮಾಡ್ತಿದ್ದಾರೆ.‌ಜನತಾ ಮಿತ್ರ, ಜನತಾ ಜಲಧಾರೆ ಮೂಲಕ ಯಾತ್ರೆಗಳನ್ನ ಶುರು ಮಾಡಿದ ಕುಮಾರಸ್ವಾಮಿ ಇಗ ಪಂಚರತ್ನ ರಥಯಾತ್ರೆ ಮಾಡ್ತಿದ್ದಾರೆ. ಈಗಾಗಲೇ 93 ಅಭ್ಯರ್ಥಿಗಳ ಲಿಸ್ಟ್ ಸಿದ್ಧವಾಗ್ತಿದ್ದಂತೆ ಹಲವೆಡೆ ಅಸಮಧಾನಗಳು ಶುರುವಾಗ್ತಿದೆ. ಹಾಸನದಲ್ಲಿ ಟಿಕೆಟ್ ಗೊಂದಲದ ಬೆನ್ನಲ್ಲೇ ಇಗ ಮತ್ತೊಂದು ಕ್ಷೇತ್ರದಲ್ಲಿ ಹಾಲಿ ಶಾಸಕರ ವಿರುದ್ಧವೇ ಕಾರ್ಯಕರ್ತರ ಅಸಮಧಾನ ಶುರುವಾಗಿದೆ.ಪಂಚರತ್ನ ರಥಯಾತ್ರೆಯಲ್ಲಿ ಬ್ಯುಸಿಯಾಗಿರುವ ಮಾಜಿ ಸಿಎಂ ಕುಮಾರಸ್ವಾಮಿ ಅವರಿಗೆ ಮತ್ತೊಂದು ಟೆನ್ಷನ್ ಶುರುವಾದಂತಿದೆ. ಇನ್ನೂ ಹಾಸನದ ಟಿಕೆಟ್ ಗೊಂದಲ ಬಗೆಹರಿಯದೆ ಇರುವಾಗಲೇ ಮತ್ತೊಂದು ಗೊಂದಲ‌ ಶುರುವಾಗಿದೆ. ರಾಷ್ಟ್ರೀಯ ಪಕ್ಷಗಳಿಗೆ ಸೆಡ್ಡು ಹೊಡೆದು ಸ್ವತಂತ್ರವಾಗಿ ಅಧಿಕಾರಕ್ಕೆ ಬರಬೇಕಂತ ಮೊದಲ ಹಂತದ ಅಭ್ಯರ್ಥಿಗಳ ಪಟ್ಟಿಯನ್ನ ಬಿಡುಗಡೆ ಮಾಡಿ ಪಂಚರತ್ನ ರಥಯಾತ್ರೆ ಜೊತೆಗೆ ಅಭ್ಯರ್ಥಿಗಳ ಪರ ಎಲೆಕ್ಷನ್ ಪ್ರಚಾರವನ್ನು ಶುರುಮಾಡಿದ್ದಾರೆ. ನಾವು ಅಧಿಕಾರಕ್ಕೆ ಬಂದ್ರೆ  ದೇವನಹಳ್ಳಿಯ ಹಾಲಿ‌ಶಾಸಕರಾದ ನಿಸರ್ಗ ನಾರಾಯಣ್ ಸ್ವಾಮಿ ಗೆದ್ರೆ ಅವರನ್ನ ಸಚಿವರನ್ನಾಗಿ ಮಾಡ್ತಿವಿ ಅಂತಾ ಕುಮಾರಸ್ವಾಮಿ ಅವರು ಹೇಳಿಕೆ ನೀಡಿದ್ದ ಬೆನ್ನಲೆ ಹಾಲಿ ಶಾಸಕರ ವಿರುದ್ದ ಸ್ವಪಕ್ಷದ ಕಾರ್ಯಕರ್ತರೇ ಅಸಮಧಾನ ವ್ಯಕ್ತಪಡಿಸಿರೋದು ಅಚ್ಚರಿ ಮೂಡಿಸಿದೆ.

ದೇವನಹಳ್ಳಿ ಹಾಲಿ ಶಾಸಕರ ವಿರುದ್ದ ಸ್ವಪಕ್ಷದವರೇ ಟಿಕೇಟ್ ನೀಡಬೇಡಿ ಎಂಬ ಧ್ವನಿ ಎತ್ತಿದ್ದಾರೆ. ಇಂದು ಬೆಳಗ್ಗೆ ಜೆಡಿಎಸ್ ಕಚೇರಿಯ ಮುಂದೆ ದೇವನಹಳ್ಳಿಯ ಕೆಲ ಕಾರ್ಯಕರ್ತರು ವರಿಷ್ಠರಿಗೆ ಈ ಬಗ್ಗೆ ಮನವಿ ಕೊಡಬೇಕಂತ ಹಲವು ಕಾರ್ಯಕರ್ತರು ಆಗಮಿಸಿ ಶಾಸಕರ ಕಾರ್ಯವೈಖರಿಗೆ ಕಾರ್ಯಕರ್ತರಿಂದ ಅಸಮಾಧಾನ ವ್ಯಕ್ತಪಡಿಸಿದ್ರು. ಶಾಸಕರು ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ,ನಿಸರ್ಗ ನಾರಾಯಣಸ್ವಾಮಿಗೆ ಟಿಕೆಟ್ ನೀಡಿದ್ರೆ ಪಕ್ಷದ ಪರ ಕೆಲಸ ಮಾಡಲ್ಲ ಹೊಸಬರಿಗೆ ಅವಕಾಶ ಕೊಟ್ಟು  ಅಭ್ಯರ್ಥಿ ಬದಲಿಸುವಂತೆ ಕಾರ್ಯಕರ್ತರು ಆಗ್ರಹ ಮಾಡಿದ್ರು.

ವಿಧಾನಸಭಾ ಎಲೆಕ್ಷನ್ ಹತ್ತಿರ ಬರ್ತಿದ್ದಂತೆ ಟಿಕೇಟ್ ಅಸಮದಾನ ಕಾವು ಜೆಡಿಎಸ್ ನಾಯಕರಿಗೆ ತಟ್ಟುತ್ತಿದೆ. ಒಂದು ಕಡೆ ಹಾಸನದಲ್ಲಿ ಇನ್ನೂ ಟಿಕೆಟ್ ಗೊಂದಲ ನಿವಾರಣೆಗೆ ಕುಮಾರಸ್ವಾಮಿ ಪ್ರಯತ್ನದಲ್ಲಿರುವಾಗಲೇ ದೇವನಹಳ್ಳಿಯ ಹಾಲಿ ಶಾಸಕರ ವಿರುದ್ದ ಅಸಮಧಾನ ಶುರುವಾಗಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments