ಕನ್ನಡ ಚಿತ್ರರಂಗ ಖ್ಯಾತ ಹಿರಿಯ ನಟಿ ಅಬಿಜಾತ ಕಲಾವಿಧೆ ಲೀಲಾವತಿಯವರು ವಯೋಸಹಜ ಕಾಯಿಲೆಯಿಂದ ಮೃತಪಟ್ಟಿದ್ದಾರೆ.ಇನ್ನು ಇವರ ಸಾವಿನ ಸುದ್ದಿಯನ್ನ ಕೇಳುತ್ತಿದ್ದಂತೆ ರಾಜಕೀಯ ನಾಯಕರು,ಚಿತ್ರ ಕಾಲಾವಿಧರು,ಅನೇಕ ಗಣ್ಯರು ಹಾಗೂ ಸಾಕಷ್ಟು ಕಾಲಾಭಿಮಾನಿಗಳು ಲೀಲಾವತಿಯವರ ಅಂತಿಮ ದರ್ಶನವನ್ನು ಪಡೆದು ಕೊಂಡ್ರು. ಇನ್ನು ಇದೇ ಸಮಯದಲ್ಲಿ ಲೀಲಾವತಿಯವರು ಇನ್ನಿಲ್ಲ ಎಂಬ ನಿರವಮೌನ ಎಲ್ಲರಲ್ಲಿ ಮನೆ ಮಾಡಿತ್ತು.
ಇನ್ನು ನಟಿ ಲೀಲಾವತಿ ಅವರ ಸಾವಿಗೆ ಸಿಎಂ ಸಿದ್ಧರಾಮಯ್ಯ, ಮಾಜಿ ಸಿಎಂಗಳಾದ ಬಿಎಸ್ ಯಡಿಯೂರಪ್ಪ, ಎಚ್‌ಡಿ ಕುಮಾರಸ್ವಾಮಿ, ನಟಿ ಹಾಗೂ ಸಂಸದೆ ಸುಮಲತಾ ಅಂಬರೀಷ್, ಡಿಸಿಎಂ ಡಿಕೆ ಶಿವಕುಮಾರ್ ಸಂತಾಪ ವ್ಯಕ್ತಪಡಿಸಿ ತಮ್ಮ ಖಾತೆಯಲ್ಲಿ ಸಂತಾಪದ ಟ್ವೀಟ್ ಮಾಡಿದ್ದಾರೆ.