Publish Date: Tue, 20 Jun 2017 (12:26 IST)
Updated Date: Tue, 20 Jun 2017 (12:28 IST)
ಬೆಂಗಳೂರು: ಜಾಹೀರಾತು ಫಲಕಗಳ ವೆಚ್ಚ ಬಿಬಿಎಂಪಿಗೆ ಪಾವತಿ ಮಾಡದ ಆರೋಪದಲ್ಲಿ ಸಿಎಂ ಸಿದ್ದರಾಮಯ್ಯ ವಿರುದ್ಧ ಲೋಕಾಯುಕ್ತಕ್ಕೆ ಬಿಜೆಪಿ ನಗರ ಆಯುಕ್ತ ಎನ್.ಆರ್. ರಮೇಶ್ ದೂರು ನೀಡಿದ್ದಾರೆ.
ಸಿಎಂ ಸಿದ್ದರಾಮಯ್ಯ ತಮ್ಮ ಪಕ್ಷದ ಹಾಗೂ ಸರ್ಕಾರದ ಯೋಜನೆಗಳಿಗಾಗಿ ನಗರಾದ್ಯಂತ ಜಾಹೀರಾತು ಫಲಕ ಹಾಕಿದ ಬಾಬ್ತು ಬೆಂಗಳೂರು ಮಹಾನಗರ ಪಾಲಿಕೆಗೆ 68.15 ಕೋಟಿ ರೂ. ಪಾವತಿ ಮಾಡಬೇಕಿದೆ.
ಆದರೆ ಇನ್ನೂ ಹಣ ಪಾವತಿ ಬಾಕಿ ಉಳಿಸಿಕೊಂಡಿದ್ದಾರೆಂದು ಸಿಎಂ ವಿರುದ್ಧ ಲೋಕಾಯುಕ್ತರಿಗೆ ರಮೇಶ್ ದೂರು ನೀಡಿದ್ದಾರೆ. ಈ ಬಗ್ಗೆ ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು ಮಾಹಿತಿ ನೀಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ