Select Your Language

Notifications

webdunia
webdunia
webdunia
webdunia

ಕೋಮುವಾದಿ ಬಿಜೆಪಿ ಅಧಿಕಾರಕ್ಕೆ ಬರಲೇ ಬಾರದು: ಸಿಎಂ ಸಿದ್ದರಾಮಯ್ಯ

ಕೋಮುವಾದಿ ಬಿಜೆಪಿ ಅಧಿಕಾರಕ್ಕೆ ಬರಲೇ ಬಾರದು: ಸಿಎಂ ಸಿದ್ದರಾಮಯ್ಯ
ಬೆಂಗಳೂರು , ಗುರುವಾರ, 27 ಅಕ್ಟೋಬರ್ 2016 (16:24 IST)
ಪ್ರಜಾಪ್ರಭತ್ವದಲ್ಲಿ ಯಾರು ಬೇಕಾದರು ಅಧಿಕಾರಕ್ಕೆ ಬರಬಹುದು. ಆದರೆ, ಕೋಮುವಾದಿ ಬಿಜೆಪಿ ಮಾತ್ರ ಅಧಿಕಾರಕ್ಕೆ ಬರಲೇ ಬಾರದು ಎಂದು ಸಿಎಂ ಸಿದ್ದರಾಮಯ್ಯ ಕಿಡಿಕಾರಿದರು.
 
ಕೆಪಿಸಿಸಿ ಅಧ್ಯಕ್ಷರಾಗಿ ಡಾ.ಜಿ.ಪರಮೇಶ್ವರ್ ಅವರು 6 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಇಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ಕಾಂಗ್ರೆಸ್ ಪಕ್ಷದಿಂದ ಸಾರ್ಥಕ ಸಮಾವೇಶ ಹಮ್ಮಿಕೊಳ್ಳಲಾಗಿತ್ತು. 
 
ಸಮಾವೇಶದಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ್ ಅವರು ಪಕ್ಷದ ನೇತೃತ್ವವಹಿಸಿ ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬರಲು ಕಾರಣರಾಗಿದ್ದಾರೆ ಎಂದು ಪಕ್ಷ ಹಾಗೂ ರಾಜ್ಯದ ಜನತೆಯ ವತಿಯಿಂದ ಅಭಿನಂದಿಸಿದರು.
 
ಕರಾವಳಿ ಪ್ರದೇಶದಲ್ಲಿ ಕೋಮು ಸಾಮರಸ್ಯದ ಹಿನ್ನೆಲೆಯಲ್ಲಿ ಮಂಗಳೂರಿನಿಂದ ಉಡುಪಿಯವರೆಗೂ ಪಾದಯಾತ್ರೆ ಕೈಗೊಂಡು ಜನತೆಯಲ್ಲಿ ಆತ್ಮಸ್ಥೈರ್ಯ ತುಂಬುತ್ತೇನೆ ಎಂದು ಭರವಸೆ ನೀಡಿದರು.
 
ಗಿಫ್ಟ್ ಅಂದ್ರೆ ಸಿಎಂ ಸಿದ್ದುಗೆ ಭಯವಂತೆ......
 
ಸಾರ್ಥಕ ಸಮಾವೇಶದಲ್ಲಿ ಬೆಳ್ಳಿ ಕಿರೀಟ್ ಹಾಗೂ ಗದೆ ಕೊಟ್ಟು ಕಾರ್ಯಕರ್ತರು ಸನ್ಮಾನಿಸಿದ ಹಿನ್ನೆಲೆಯಲ್ಲಿ ಬೆಳ್ಳಿ ಕಿರೀಟ್ ಹಾಗೂ ಗದೆ ಕಾರ್ಯಕರ್ತರಿಗೆ ಸಲ್ಲಬೇಕಾಗಿದ್ದು. ಕಾರ್ಯಕರ್ತರ ಮನಸ್ಸಿಗೆ ನೋವಾಗಬಾರದು ಎಂದು ಇವುಗಳನ್ನು ಸ್ವೀಕರಿಸಿದೆ. ಹ್ಯೂಬ್ರೆಟ್ ವಾಚ್ ಪ್ರಕರಣದ ನಂತರ ಗಿಫ್ಟ್ ತೆಗೆದುಕೊಳ್ಳಲು ಭಯವಾಗುತ್ತಿದೆ ಎಂದು ಸಿಎಂ ಸಿದ್ದರಾಮಯ್ಯ ಲೇವಡಿ ಮಾಡಿದರು. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಜಯಾ, ಕರುಣಾ ಆರೋಗ್ಯದಲ್ಲಿ ಚೇತರಿಕೆ