Select Your Language

Notifications

webdunia
webdunia
webdunia
webdunia

ಬಸ್ ಮೇಲೆ ಬಿದ್ದ ತೆಂಗಿನಮರ: ಪ್ರಯಾಣಿಕರು ಪಾರು!

ಬಸ್ ಮೇಲೆ ಬಿದ್ದ ತೆಂಗಿನಮರ: ಪ್ರಯಾಣಿಕರು ಪಾರು!
bengaluru , ಮಂಗಳವಾರ, 17 ಆಗಸ್ಟ್ 2021 (15:25 IST)
ಸಿಟಿ ಬಸ್ ಮೇಲೆ ತೆಂಗಿನಮರ ಬಿದ್ದ ಘಟನೆ ಮಂಗಳೂರುನಗರದ ಮಲ್ಲಿಕಟ್ಟೆಯ ಸರ್ಕಲ್‌ ಬಳಿ ಸಂಭವಿಸಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಹಾನಿಯಾಗಿಲ್ಲ.
ಸಿಟಿ ಬಸ್ ನಂತೂರು ಕಡೆಗೆ ಹೋಗುತ್ತಿತ್ತು. ಈ ವೇಳೆ ಬೃಹತ್ ತೆಂಗಿನಮರ ಬಸ್ ಮೇಲೆ ಬಿದ್ದಿದೆ. ಮರ ಬಿದ್ದ ಪರಿಣಾಮ ವಿದ್ಯುತ್ ಲೈನ್‌ಗಳು ಜಖಂಗೊಂಡಿವೆ.
ಸ್ಥಳಕ್ಕೆ ಬಂದ ಸಂಚಾರಿ ಪೊಲೀಸರು ಸಾರ್ವಕನಿಕರ ಸಹಕಾರದಲ್ಲಿ ತೆಂಗಿನಮರ ತೆರವು ಕಾರ್ಯಾಚರಣೆ ನಡೆಸಿದರು. ಘಟನಾ ಸ್ಥಳಕ್ಕೆ ಎಐಸಿಸಿ ಕಾರ್ಯದರ್ಶಿ ಐವನ್ ಡಿಸೋಜಾ ಭೇಟಿ ನೀಡಿ ಪರಿಶೀಲಿಸಿದರು.

Share this Story:

Follow Webdunia kannada

ಮುಂದಿನ ಸುದ್ದಿ

ಆಭರಣ ಪ್ರಿಯರಿಗೆ ಸಿಹಿ ಸುದ್ದಿ; ಚಿನ್ನದ ಬೆಲೆ ಕಡಿಮೆಯಾಗಿದೆ ನೋಡಿ..!