Select Your Language

Notifications

webdunia
webdunia
webdunia
webdunia

ಕುಡಿಯುವ ನೀರಿನ ಬಾಟೆಲ್ ನಲ್ಲಿ ಜಿರಳೆ ಪತ್ತೆ

ಕುಡಿಯುವ ನೀರಿನ ಬಾಟೆಲ್ ನಲ್ಲಿ ಜಿರಳೆ ಪತ್ತೆ
ಗದಗ , ಗುರುವಾರ, 26 ಅಕ್ಟೋಬರ್ 2017 (13:54 IST)
ಗದಗ: ಮನೆಯಿಂದ ನೀರು ತೆಗೆದುಕೊಂಡು ಹೋಗಿಲ್ವ. ಹೊರಗಡೆ ನೀರಿನ ಬಾಟೆಲ್ ತೆಗೆದುಕೊಳ್ಳುವ ಅನಿವಾರ್ಯ ಇದೆಯಾ… ಹಾಗಿದ್ರೆ ಇನ್ಮುಂದೆ ಸ್ವಲ್ಪ ಎಚ್ಚರಿಕೆಯಿಂದಿರಿ.

ರೋಣ ತಾಲೂಕಿನ ಅಬ್ಬಿಗೇರಿ ಗ್ರಾಮದ ಹೊಟೇಲ್‌ ವೊಂದರಲ್ಲಿ ಖರೀದಿಸಿದ 2 ಲೀಟರ್‌ ವಾಟರ್ ಬಾಟಲಿಯಲ್ಲಿ ಜಿರಳೆ ಪತ್ತೆಯಾಗಿದೆ. ನೀರಿನ ಬಾಟೆಲ್ ನಲ್ಲಿ ಜಿರಳೆ ಕಂಡು ಗ್ರಾಹಕರು ಬೆಚ್ಚಿಬಿದ್ದಿದ್ದಾರೆ. ಹೊಟೇಲ್‌ ಗೆ ಊಟಕ್ಕೆ ಹೋಗಿದ್ದ ಸಾರ್ವಜನಿಕರು ಬಾಟೆಲ್‌ ನಲ್ಲಿ ಜಿರಳೆ ಇರುವುದನ್ನು ತಮ್ಮ ಮೊಬೈಲ್‌ನಲ್ಲಿ ಸೆರೆಹಿಡಿದಿದ್ದು, ಈ ವಿಡಿಯೋ ವೈರಲ್‌ ಆಗಿದೆ.

ಕೊಪ್ಪಳದ ತಾವರಗೇರಿ ರಸ್ತೆಯಲ್ಲಿನ ಶುದ್ಧ ಕುಡಿಯುವ ನೀರಿನ ಘಟಕದಲ್ಲಿ ಈ ವಾಟರ್ ಬಾಟೆಲ್‌ ಗಳು ತಯಾರಾಗುತ್ತವೆ ಎನ್ನಲಾಗ್ತಿದೆ. ಇನ್ಮುಂದೆ ಬಾಟೆಲ್ ನಲ್ಲಿನ ನೀರು ತೆಗೆದುಕೊಳ್ಳುವ ಮೊದಲು ಪರಿಶೀಲಿಸಿ ಖರೀದಿಸಿ.

Share this Story:

Follow Webdunia kannada

ಮುಂದಿನ ಸುದ್ದಿ

ತಾಜ್ ಮಹಲ್ ಪ್ರವೇಶಿಸಿದ ಮೊದಲ ಉತ್ತರಪ್ರದೇಶದ ಬಿಜೆಪಿ ಸಿಎಂ