Publish Date: Thu, 01 Sep 2022 (08:10 IST)
Updated Date: Thu, 01 Sep 2022 (08:12 IST)
ಬೆಂಗಳೂರು : ಉತ್ತರ ಪ್ರದೇಶದ ಮುಖ್ಯಮಮಂತ್ರಿ ಯೋಗಿ ಆದಿತ್ಯನಾಥ್ ಅವರು ಇಂದು ನೆಲಮಂಗಲಕ್ಕೆ ಭೇಟಿ ನೀಡಲಿದ್ದಾರೆ.
ಧರ್ಮಸ್ಥಳದ ಧರ್ಮಾಧಿಕಾರಿಯಿಂದ ನಿರ್ಮಿತವಾಗಿರುವ ರಾಷ್ಟ್ರೀಯ ಹೆದ್ದಾರಿ 75ರ ಮಹದೇವಪುರದ ಕ್ಷೇಮಾವನವನ್ನು ಯೋಗಿ ಆದಿತ್ಯನಾಥ್ ಅವರು ಉದ್ಘಾಟನೆ ಮಾಡಲಿದ್ದಾರೆ.
ಯೋಗಿ ಆಗಮನ ಹಿನ್ನೆಲೆ ಪೊಲೀಸರಿಂದ ಬಿಗಿ ಬಂದೋಬಸ್ತ್ ಮಾಡಲಾಗಿದೆ. ಅಲ್ಲದೇ ಈ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕೂಡ ಪಾಲ್ಗೊಳ್ಳಲಿದ್ದಾರೆ.
ಮಳೆ ಸಮಸ್ಯೆಯಾದರೆ ಬೆಂಗಳೂರಿನಿಂದ ಮಹದೇವಪುರಕ್ಕೆ ಯೋಗಿ ಕಾರಿನಲ್ಲಿ ಪ್ರಯಾಣ ಮಾಡಲಿದ್ದಾರೆ. ಈಗಾಗಲೇ ನೆಲಮಂಗಲದ ಬಾವಿಕೆರೆ ಬಳಿ ಎರಡು ಹೆಲಿಪ್ಯಾಡ್ ನಿರ್ಮಾಣ ಮಾಡಲಾಗಿದೆ. ಯೋಗಿ ಭದ್ರತೆಗಾಗಿ 1 ಎಸ್ಪಿ, 1 ಎಎಸ್ಪಿ, 6 ಡಿವೈಎಸ್ಪಿ, 20 ಸಿಪಿಐ, 50 ಪಿಎಸ್ಐ, 600 ಪೊಲೀಸ್ ಸಿಬ್ಬಂದಿ, 1 ಕೆಎಸ್ಆರ್ಪಿ ತುಕಡಿ, ಹಾಗೂ 2 ಡಿಎಆರ್ ತುಕಡಿ ನಿಯೋಜಿಸಲಾಗಿದೆ.