ಬೆಂಗಳೂರು: ಕೊರೋನಾ ಎರಡನೇ ಅಲೆ ಹೆಚ್ಚುತ್ತಿರುವ ಹಿನ್ನಲೆಯಲ್ಲಿ ರಾಜ್ಯದಲ್ಲಿ ಕೆಲವೊಂದು ನಿರ್ಬಂಧ ವಿಧಿಸಿರುವ ರಾಜ್ಯ ಸರ್ಕಾರ ಶೈಕ್ಷಣಿಕ ಸಂಸ್ಥೆಗಳನ್ನು ಬಂದ್ ಮಾಡದೇ ಇರಲು ನಿರ್ಧರಿಸಿದೆ.
ಕೊರೋನಾ ಅಲೆ ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಶಾಲಾ-ಕಾಲೇಜುಗಳಿಗೆ ರಜೆ ನೀಡಬಹುದು, ಪರೀಕ್ಷೆ ಇಲ್ಲದೇ ಕಳೆದ ವರ್ಷದಂತೇ ಪಾಸ್ ಮಾಡಬಹುದು ಎಂಬಿತ್ಯಾದಿ ಸುದ್ದಿಗಳಿದ್ದವು.
ಅವೆಲ್ಲವನ್ನೂ ಸರ್ಕಾರ ತಳ್ಳಿ ಹಾಕಿದೆ. ಒಂದರಿಂದ ಒಂಭತ್ತನೇ ತರಗತಿವರೆಗಿನ ವಿದ್ಯಾರ್ಥಿಗಳನ್ನು ಪರೀಕ್ಷೆ ಇಲ್ಲದೇ ಪಾಸ್ ಮಾಡಲಾಗುತ್ತದೆ ಎಂಬ ವರದಿಗಳನ್ನು ಮುಖ್ಯಮಂತ್ರಿಗಳು ತಳ್ಳಿ ಹಾಕಿದ್ದಾರೆ. ಇನ್ನು 15 ದಿನಗಳಲ್ಲಿ ಪರೀಕ್ಷೆ ಮುಗಿಸಬಹುದು. ತಜ್ಞರ ಸಲಹೆ ಪಡೆದು ಶಾಲೆ ಬಂದ್ ಮಾಡದೇ ಇರಲು ಸರ್ಕಾರ ತೀರ್ಮಾನಿಸಿದೆ.