Select Your Language

Notifications

webdunia
webdunia
webdunia
webdunia

ನನನ್ನು ನೋಡಲು ಬರುವಾಗ ಹಾರ ತುರಾಯಿ ತರಬೇಡಿ ಎಂದು ಮನವಿ ಮಾಡಿದ ಸಿಎಂ ಯಡಿಯೂರಪ್ಪ

ನನನ್ನು ನೋಡಲು ಬರುವಾಗ ಹಾರ ತುರಾಯಿ ತರಬೇಡಿ ಎಂದು ಮನವಿ ಮಾಡಿದ ಸಿಎಂ ಯಡಿಯೂರಪ್ಪ
ಬೆಂಗಳೂರು , ಭಾನುವಾರ, 28 ಜುಲೈ 2019 (09:32 IST)
ಬೆಂಗಳೂರು: ತಮ್ಮ ನೆಚ್ಚಿನ ಜನನಾಯಕನನ್ನು ನೋಡಲು ಬರುವಾಗ ಅಭಿನಂದನೆ ಸಲ್ಲಿಸುವ ನೆಪದಲ್ಲಿ ಅಭಿಮಾನಿಗಳು ಹಾರ ತುರಾಯಿಗಳ ಸಮೇತ ಬರುವುದು ಸಾಮಾನ್ಯ.


ಆದರೆ ರಾಜ್ಯದಲ್ಲಿ ಬರಪರಿಸ್ಥಿತಿ ಇರುವಾಗ ಯಾರೂ ಹಾರ ತುರಾಯಿಗಾಗಿ ದುಂದುವೆಚ್ಚ ಮಾಡಬೇಡಿ ಎಂದು ನೂತನ ಸಿಎಂ ಯಡಿಯೂರಪ್ಪ ಮನವಿ ಮಾಡಿದ್ದಾರೆ.

‘ನನ್ನನ್ನು ಭೇಟಿ ಮಾಡಿ ಶುಭ ಕೋರಲು ರಾಜ್ಯದ ಮೂಲೆ ಮೂಲೆಗಳಿಂದ ಅಭಿಮಾನಿಗಳು, ಕಾರ್ಯಕರ್ತರು ಬರುತ್ತಿರುವುದು ಸಂತೋಷ ತಂದಿದೆ. ರಾಜ್ಯದಲ್ಲಿ ಬರ ತಾಂಡವವಾಡುತ್ತಿದೆ, ಈ ಸಂದರ್ಭದಲ್ಲಿ ನೀವುಗಳು ಹೂಗುಚ್ಛ, ಹಾರ, ಶಾಲುಗಳನ್ನು ತರುವ ಮೂಲಕ ವೆಚ್ಚ ಮಾಡುವುದು ಬೇಡ. ನಿಮ್ಮ ಹಾರೈಕೆಯೇ ನನಗೆ ದೊಡ್ಡ ಉಡುಗೊರೆ. ದಯವಿಟ್ಟು ಸಹಕರಿಸಿ’ ಎಂದು ಸಿಎಂ ಟ್ವಿಟರ್ ಮೂಲಕ ಮನವಿ ಮಾಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ವಿದ್ಯುತ್‌ ಚಾಲಿತ ವಾಹನಗಳ ಮೇಲಿನ ಜಿಎಸ್‌ ಟಿ ಶೇ 12ರಿಂದ ಶೇ 5ಕ್ಕೆ ಇಳಿಕೆ