Publish Date: Wed, 18 Dec 2019 (16:41 IST)
Updated Date: Wed, 18 Dec 2019 (16:43 IST)
ಸಿಎಂ ಬಿ.ಎಸ್.ಯಡಿಯೂರಪ್ಪಗೆ ಹಾವಿನ ಕಾಟ ಶುರುವಾಗಿದೆಯಾ? ಇಂಥದ್ದೊಂದು ಅನುಮಾನಕ್ಕೆ ಇದೀಗ ಪುಷ್ಠಿ ನೀಡುವಂತ ಘಟನೆ ನಡೆದಿದೆ.
ಸಿಎಂ ಬಿ.ಎಸ್. ಯಡಿಯೂರಪ್ಪ ಅವರು ಹುಬ್ಬಳ್ಳಿಗೆ ಬರುತ್ತಿರುವುದು ಎಲ್ಲರಿಗೂ ತಿಳಿದ ವಿಷಯ. ರಾಜ್ಯದ ಸಿ ಎಮ್ ಬರ್ತಿದ್ದಾರೆ ಎಂದರೆ ಸ್ಟೇಜ್ ದೊಡ್ಡಮಟ್ಟದಲ್ಲಿ ತಯಾರಿ ನಡೆಯುತ್ತಿತ್ತು. ಆದರೆ ಅಲ್ಲಿ ಭಯ ಹುಟ್ಟಿಸುರ ಉರಗ ಕಂಡುಬಂದಿದೆ.
ಹುಬ್ಬಳ್ಳಿ ನಗರದ ರಾಜ್ಯ ಹೆದ್ದಾರಿ - 73ರ ಶ್ರೀ ಕಾಡಸಿದ್ದೇಶ್ವರ ಕಾಲೇಜಿನಿಂದ ತೋಳನಕೆರೆಯವರೆಗೆ ನಿರ್ಮಿಸಲಾಗಿರುವ ಟೆಂಡರ್ SURE ರಸ್ತೆಯನ್ನು ಮುಖ್ಯಮಂತ್ರಿ ಯಡಿಯೂರಪ್ಪನವರು ಲೋಕಾರ್ಪಣೆ ಮಾಡಿದ್ರು.
ಚೇತನಾ ಕಾಲೇಜ್ ಹತ್ತಿರದ ಮೈದಾನಲ್ಲಿ ಬೃಹತ್ ಆಕಾರದಲ್ಲಿ ಸ್ಟೇಜ್ ಮಾಡುತ್ತಿರುವ ಸಂದರ್ಭದಲ್ಲಿ ಒಂದು ಟೇಬಲ್ ದಲ್ಲಿ ಕೆರೆ ಹಾವು ಕಂಡು ಬಂದಿದೆ. ಸ್ನೇಕ್ ಸಂಗಮೇಶ ಅವರನ್ನು ಕರೆಯಿಸಿ ಆ ಹಾವನ್ನು ಹಿಡಿಸಲಾಗಿದೆ. ಆ ಮೂಲಕ ಸಿಎಂಗೆ ಹಾವಿನ ಕಾಟ ಶುರುವಾಯಿತಾ ಅಂತ ಮಾತನಾಡಿಕೊಳ್ಳುತ್ತಿರೋದು, ಚರ್ಚೆ ನಡೆದಿರೋದು ಕಂಡುಬಂತು.