Webdunia - Bharat's app for daily news and videos

Install App

2025 ರಲ್ಲಿ ಸಿಎಂ ಬದಲಾವಣೆ ಪಕ್ಕಾ: ಕರ್ನಾಟಕಕ್ಕೆ ಹೊಸ ಸಿಎಂ ಯಾರಾಗಬೇಕು

Krishnaveni K
ಮಂಗಳವಾರ, 7 ಜನವರಿ 2025 (16:19 IST)
ಬೆಂಗಳೂರು: 2025 ರಲ್ಲಿ ಕರ್ನಾಟಕದಲ್ಲಿ ಸಿಎಂ ಬದಲಾವಣೆಯಾಗುವುದು ಬಹುತೇಕ ಖಚಿತವೆನ್ನಲಾಗುತ್ತಿದೆ. ಹಾಗಿದ್ದರೆ ಹೊಸ ಸಿಎಂ ಆಗಿ ಯಾರಾಗಬೇಕು ಎಂದು ನೀವು ಬಯಸುತ್ತೀರಿ?

ಇತ್ತೀಚೆಗೆ ಸಿಎಂ ಬದಲಾವಣೆ ವಿಚಾರದ ಬಗ್ಗೆ ಕಾಂಗ್ರೆಸ್ ನಾಯಕರಲ್ಲಿ ತೆರೆಮರೆಯಲ್ಲಿ ಪ್ರಯತ್ನಗಳು ನಡೆಯುತ್ತಲೇ ಇವೆ. ಸಿದ್ದರಾಮಯ್ಯ ಈ ವರ್ಷ ಸಿಎಂ ಕುರ್ಚಿ ಕಳೆದುಕೊಳ್ಳುವುದು ಪಕ್ಕಾ ಎನ್ನುತ್ತಿವೆ ವರದಿಗಳು. ಹಾಗಿದ್ದರೆ ಅವರ ಸ್ಥಾನವನ್ನು ತುಂಬುವವರು ಯಾರು ಎಂಬ ಪ್ರಶ್ನೆ ಎದುರಾಗಿದೆ.

ಈ ಮೊದಲು ಆಗಿದ್ದರೆ ಡಿಕೆ ಶಿವಕುಮಾರ್ ಎಂದು ಪಕ್ಕನೇ ಹೇಳಬಹುದಿತ್ತು. ಆದರೆ ಈಗ ಪರಿಸ್ಥಿತಿ ಬದಲಾಗಿದೆ. ಕಾಂಗ್ರೆಸ್ ನಲ್ಲಿ ಸಿಎಂ ಆಕಾಂಕ್ಷಿಗಳ ಪಟ್ಟಿಯೇ ಇದೆ. ಡಿಕೆ ಶಿವಕುಮಾರ್ ರಿಂದ ಹಿಡಿದು ಸತೀಶ್ ಜಾರಕಿಹೊಳಿ, ಜಿ ಪರಮೇಶ್ವರ್, ಎಂಬಿ ಪಾಟೀಲ್ ಸೇರಿದಂತೆ ಎಲ್ಲರೂ ಆಕಾಂಕ್ಷಿಗಳೇ.
ಈ ನಡುವೆ ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ವಿಚಾರವೂ ಪ್ರಸ್ತಾಪವಾಗಿದೆ. ಕೆಪಿಸಿಸಿ ಸ್ಥಾನದಿಂಧ ಡಿಕೆ ಶಿವಕುಮಾರ್ ಅವರನ್ನು ಕಿತ್ತು ಹಾಕಿದರೆ ಅವರು ಸಿಎಂ ಸ್ಥಾನಕ್ಕೆ ಬೇಡಿಕೆಯಿಡಬಹುದು. ಆದರೆ ಸಿಎಂ ಸ್ಥಾನದಿಂದ ಕೆಳಗಿಳಿಯಬೇಕಾದರೆ ತಮ್ಮ ಆಪ್ತ ವಲಯದಲ್ಲಿರುವ ಸತೀಶ್ ಜಾರಕಿಹೊಳಿಗೆ ಪಟ್ಟ ಕೊಡಬೇಕೆಂದು ಸಿದ್ದು ಆಗ್ರಹಿಸಿದರೂ ಅಚ್ಚರಿಯಿಲ್ಲ. ಹೀಗಾಗಿ ಸತೀಶ್ ಜಾರಕಿಹೊಳಿ ಅಥವಾ ಡಿಕೆ ಶಿವಕುಮಾರ್ ಇಬ್ಬರಲ್ಲಿ ಒಬ್ಬರು ಸಿಎಂ ಆಗುವುದು ಪಕ್ಕಾ ಎನ್ನಲಾಗುತ್ತಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments