Publish Date: Mon, 26 Aug 2019 (10:23 IST)
Updated Date: Mon, 26 Aug 2019 (10:26 IST)
ಬೆಂಗಳೂರು : ಈಗಾಗಲೇ ಬಿಜೆಪಿ ಸರ್ಕಾರದ ಸಚಿವ ಸಂಪುಟ ವಿಸ್ತರಣೆ ಮಾಡಿದ ಸಿಎಂ ಯಡಿಯೂರಪ್ಪ ಅವರು ಇಂದು ನೂತನ ಸಚಿವರಿಗೆ ಖಾತೆ ಹಂಚಿಕೆ ಮಾಡಲಿದ್ದಾರೆ. ಆದರೆ ಈ ಖಾತೆ ಹಂಚಿಕೆಯಲ್ಲಿ ಭಾರಿ ಲೆಕ್ಕಚಾರ ಹಾಕುತ್ತಿದ್ದಾರೆ ಎನ್ನಲಾಗಿದೆ.
ಹೌದು, ಸಿಎಂ ಯಡಿಯೂರಪ್ಪ ಪ್ರಮುಖ ಖಾತೆಗಳನ್ನು ತಮ್ಮ ಬಳಿ ಇಟ್ಟುಕೊಳ್ಳಲು ನಿರ್ಧರಿಸಿದ್ದಾರೆ ಎನ್ನಲಾಗಿದೆ. ಇಂಧನ, ಅಬಕಾರಿ, ಹಣಕಾಸು, ವೈದ್ಯಕೀಯ, ಲೋಕೋಪಯೋಗಿ ಖಾತೆ ಹಂಚಿಕೆ ಮಾಡದಿರಲು ತೀರ್ಮಾನಿಸಿದ್ದಾರೆ ಎನ್ನಲಾಗಿದೆ.
ಈಗಾಗಲೇ ಕೆಲವು ಪ್ರಮುಖ ಖಾತೆಗಳ ಮೇಲೆ ಪ್ರಭಾವಿ ಸಚಿವರು ಕಣ್ಣಿಟ್ಟಿದ್ದಾರೆ. ಅಷ್ಟೇ ಅಲ್ಲದೇ ಅನರ್ಹ ಶಾಸಕರಿಗೂ ನಿರ್ದಿಷ್ಟ ಖಾತೆ ಕೊಡುವ ಬಗ್ಗೆ ಭರವಸೆ ನೀಡಿರುವ ಹಿನ್ನೆಲೆಯಲ್ಲಿ ಯಾವ ಅಸಮಾಧಾನಕ್ಕೂ ಆಸ್ಪದ ಕೊಡದಿರಲು ಸಿಎಂ ಈ ನಿರ್ಧಾರ ಮಾಡಿದ್ದಾರೆ ಎನ್ನಲಾಗಿದೆ.