Select Your Language

Notifications

webdunia
webdunia
webdunia
webdunia

ಸಿಎಂ ಹೊಟ್ಟೆ ತುಂಬಿದರೆ ಸಾಕು, ಬೇರೆಯವರು ಉಪವಾಸವಿದ್ದರೇನು?: ವಿಶ್ವನಾಥ್ ಲೇವಡಿ

ಸಿಎಂ ಸಿದ್ದರಾಮಯ್ಯ
ಮೈಸೂರು , ಭಾನುವಾರ, 23 ಅಕ್ಟೋಬರ್ 2016 (13:09 IST)
ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಹೊಟ್ಟೆ ತುಂಬಿದೆ. ಅವರಿಗೆ ಹಸಿವಿನಿಂದ ಬಳಲುತ್ತಿರುವವರು ಕಾಣುತ್ತಿಲ್ಲ ಎಂದು ಮಾಜಿ ಸಂಸದ ಎಚ್.ವಿಶ್ವನಾಥ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
 
ಯಾವುದೇ ಸ್ಥಳದಲ್ಲಿ ಜನತೆಯ ದೂರುಗಳನ್ನು ಸ್ವೀಕರಿಸುವವನು ನಿಜವಾದ ನಾಯಕ. ಆದರೆ, ಸಿದ್ದರಾಮಯ್ಯನವರಿಗೆ ನಾಯಕನ ಬದ್ಧತೆ ಕಾಣುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
 
ಕಾಂಗ್ರೆಸ್ ಹಿರಿಯ ಮುಖಂಡ ಸಿ.ಎಂ.ಇಬ್ರಾಹಿಂ ರಾಜ್ಯ ಅಭಿವೃದ್ಧಿಯಲ್ಲಿ ಹಿಂದುಳಿದಿದೆ ಎನ್ನುವ ಹೇಳಿಕೆಯಲ್ಲಿ ಯಾವುದೇ ತಪ್ಪಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಅದರಂತೆ ವರ್ತಿಸುತ್ತಿದ್ದಾರೆ ಎಂದರು.
 
ತೃಪ್ತಿಯಿಂದ ಇರುವವರಿಗೆ ಅತೃಪ್ತಿಯಿರುವವರ ನೋವು ಅರ್ಥವಾಗುವುದಿಲ್ಲ. ತೃಪ್ತಿಯಿಂದ ಇರುವವರು ಅತೃಪ್ತಿ ಇದ್ದವರ ಮನಸ್ಸನ್ನು ಅರಿಯಲು ಪ್ರಯತ್ನಿಸಬೇಕು ಎಂದು ಹಿರಿಯ ಕಾಂಗ್ರೆಸ್ ಮುಖಂಡ ಮಾಜಿ ಸಂಸದ ಎಚ್.ವಿಶ್ವನಾಥ್ ಸಲಹೆ ನೀಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ 

Share this Story:

Follow Webdunia kannada

ಮುಂದಿನ ಸುದ್ದಿ

ಪುತ್ರಿಯ ಮೇಲೆ ರೇಪ್ ಎಸಗಿದ ತಂದೆಗೆ 1503 ವರ್ಷ ಕಠಿಣ ಶಿಕ್ಷೆ ವಿಧಿಸಿದ ಕೋರ್ಟ್