Select Your Language

Notifications

webdunia
webdunia
webdunia
webdunia

ಇನ್ನೂ ಸಿಎಂ ಸಿದ್ದರಾಮಯ್ಯ ಮೌನವಾಗಿರುವುದು ಸರಿಯಲ್ಲ: ಈಶ್ವರಪ್ಪ

ಇನ್ನೂ ಸಿಎಂ ಸಿದ್ದರಾಮಯ್ಯ ಮೌನವಾಗಿರುವುದು ಸರಿಯಲ್ಲ: ಈಶ್ವರಪ್ಪ
ಬೆಂಗಳೂರು , ಭಾನುವಾರ, 26 ಫೆಬ್ರವರಿ 2017 (14:27 IST)
ಕಾಂಗ್ರೆಸ್ ಹೈಕಮಾಂಡ್‌ಗೆ ಕಪ್ಪ ನೀಡಿದ ಕುರಿತಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಒಪ್ಪಿಕೊಳ್ಳಬೇಕು. ಮೌನವಾಗಿರುವುದು ಸರಿಯಲ್ಲ ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ.
 
ಮುಖ್ಯಮಂತ್ರಿ ಸಿದ್ದರಾಮಯ್ಯ ತಾವು ಮಾಡಿದ ಅನೇಕ ತಪ್ಪುಗಳನ್ನು ಭಂಡತನದಿಂದ ಒಪ್ಪಿಕೊಂಡಿದ್ದಾರೆ. ಇದೀಗ ಹೈಕಮಾಂಡ್‌ಗೆ ನೀಡಿದ ಕಪ್ಪದ ಬಗ್ಗೆ ಒಪ್ಪಿಕೊಂಡಲ್ಲಿ ದೇಶವೇ ಪ್ರಾಮಾಣಿಕ ರಾಜಕಾರಣಿ ಎಂದು ಒಪ್ಪಿಕೊಳ್ಳುವುದಾಗಿ ತಿಳಿಸಿದ್ದಾರೆ.
 
ಸಿಎಂ ಸಿದ್ದರಾಮಯ್ಯ ತಮ್ಮ ತಪ್ಪನ್ನು ಒಪ್ಪಿಕೊಂಡಲ್ಲಿ ಮುಂದಿನ ಬಾರಿ ಅಧಿಕಾರಕ್ಕೆ ಬಂದರೂ ಬರಬಹುದು. ಆದ್ದರಿಂದ, ಸಿಎಂ ಕೂಡಲೇ ತಮ್ಮ ಮೌನ ಮುರಿಯಲಿ ಎಂದು ಬಿಜೆಪಿ ಮುಖಂಡ ಕೆ.ಎಸ್.ಈಶ್ವರಪ್ಪ ಸಲಹೆ ನೀಡಿದ್ದಾರೆ.
 
ಡೈರಿಯಲ್ಲಿ ಕಪ್ಪ ನೀಡಿರುವ ಮಾಹಿತಿ ಬಹಿರಂಗವಾಗುತ್ತಿದ್ದಂತೆ ಸಿಎಂ ಸಿದ್ದರಾಮಯ್ಯ ಮೌನಕ್ಕೆ ಶರಣಾಗಿದ್ದರೂ. ತಮ್ಮದೇ ಸಹದ್ಯೋಗಿಗಳನ್ನು ಕೂಡಾ ಭೇಟಿ ಮಾಡಲು ನಿರಾಕರಿಸಿರುವುದನ್ನು ಸ್ಮರಿಸಬಹುದು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಜಯಲಲಿತಾರನ್ನು ಆಸ್ಪತ್ರೆಗೆ ದಾಖಲಿಸಿದಾಗ ನಾಡಿಮಿಡಿತವಿರಲಿಲ್ಲ: ವೈದ್ಯೆ ರಾಮಸೀತ