Select Your Language

Notifications

webdunia
webdunia
webdunia
webdunia

ನನ್ನ ಶೂ ಲೇಸ್‌ನ್ನು ಯಾರು ಕಟ್ಟಿಲ್ಲ, ಶೂ ಹುಡುಕಿದಾರಷ್ಟೇ: ಸಿಎಂ ಸಿದ್ದರಾಮಯ್ಯ

CM Siddaramayya says nobody was tying his shoelace
ಬೆಂಗಳೂರು , ಮಂಗಳವಾರ, 27 ಡಿಸೆಂಬರ್ 2016 (10:52 IST)
ಆಪ್ತಸಹಾಯಕನಿಂದ ಶೋ ಲೇಸ್ ಕಟ್ಟಿಸಿಕೊಂಡ ಘಟನೆಗೆ ಸಂಬಂಧಿಸಿದಂತೆ ಸ್ಪಷ್ಟಣೆ ನೀಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ನಾನು ಯಾರಿಂದಲೂ ಶೂ ಲೇಸ್‌ನ್ನು ಕಟ್ಟಿಸಿಕೊಂಡಿಲ್ಲ. ನನ್ನ ಶೂಗಾಗಿ ನನ್ನ ಸಂಬಂಧಿಯೊಬ್ಬರು ಹುಡುಕುವ ಕಾರಣಕ್ಕಾಗಿ ಬಗ್ಗಿದ್ದರು ಎಂದು ತಿಳಿಸಿದ್ದಾರೆ.
 
ಮೈಸೂರಿನಲ್ಲಿ ಹಿರಿಯ ನಟ ಚೇತನ್ ರಾಮ್ ರಾವ್ ನಿಧನದ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯ ಅಂತಿಮ ದರ್ಶನ ಪಡೆಯಲು ತೆರಳಿದ್ದರು. ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದು ಹೊರಗೆ ಬಂದ ಸಿಎಂ ಶೂ ಲೇಸ್‌ನ್ನು ತಮ್ಮ ಆಪ್ತಸಹಾಯಕನ ಕೈಯಿಂದ ಕಟ್ಟಿಸಿಕೊಂಡಿರುವ ವಿಡಿಯೋ ವೈರಲ್ ಆಗಿದೆ. 
 
ಸಾರ್ವಜನಿಕವಾಗಿಯೇ ಶೂ ಲೇಸ್ ಕಟ್ಟಿಸಿಕೊಳ್ಳುತ್ತಿರುವ ಸಿಎಂ ಮಾತ್ರ ಯಾವುದೇ ಪ್ರತಿಕ್ರಿಯಿ ನೀಡದೆ ಅಧಿಕಾರದ ದರ್ಪದಲ್ಲಿಯೇ ನಿಂತಿದ್ದರು. 
 
ಸಾರ್ವಜನಿಕವಾಗಿಯೇ ಮುಖ್ಯಮಂತ್ರಿ ಸಿದ್ದರಾಮಯ್ಯ ಆಪ್ತಸಹಾಯಕನ ಬಳಿ ಶೂ ಲೇಸ್ ಕಟ್ಟಿಸಿಕೊಳ್ಳುತ್ತಿದದ್ದು ಸರಿಯಾಗಿ ಕಾಣಿಸುತ್ತಿಲ್ಲ ಎಂದು ಕಾಂಗ್ರೆಸ್ ಮುಖಂಡರೊಬ್ಬರು ಅಭಿಪ್ರಾಯಪಟ್ಟಿದ್ದಾರೆ. ಘಟನೆಯ ನಂತರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮತ್ತೊಂದು ಮುಖ ಅನಾವರಣಗೊಂಡಿದೆ ಎಂಬ ಟೀಕೆಗಳು ವ್ಯಕ್ತವಾಗುತ್ತಿವೆ. 
 
ಘಟನೆ ಕುರಿತು ಪ್ರತಿಕ್ರಿಯೆ ನೀಡಿರುವ ಮುಖ್ಯಮಂತ್ರಿ ಕಚೇರಿ ಅಧಿಕಾರಿಗಳು, ಸಿದ್ದರಾಮಯ್ಯ ಅವರಿಗೆ ಶೂ ಹಾಕಿದ್ದು ಸರಕಾರಿ ಅಧಿಕಾರಿಯಲ್ಲ. ಅವರು ಸಿಎಂ ಸಂಬಂಧಿ ಎಂದು ಸ್ಪಷ್ಟನೆ ನೀಡಿದ್ದರು. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ರಾಜ್ಯ ಸರ್ಕಾರದಿಂದ ಒಲಿಂಪಿಕ್ ವಿಜೇತರಿಗೆ ರೂ.5 ಕೋಟಿ ಬಹುಮಾನ