Select Your Language

Notifications

webdunia
webdunia
webdunia
webdunia

ಜಯಲಲಿತಾರನ್ನು ಅಮ್ಮ ಎನ್ನುವಂತೆ ಸಿಎಂ ಸಿದ್ದರಾಮಯ್ಯರನ್ನು ಅಪ್ಪ ಎಂದು ಕರೆಯಿರಿ: ಕಾಗೋಡು

ಜಯಲಲಿತಾರನ್ನು ಅಮ್ಮ ಎನ್ನುವಂತೆ ಸಿಎಂ ಸಿದ್ದರಾಮಯ್ಯರನ್ನು ಅಪ್ಪ ಎಂದು ಕರೆಯಿರಿ: ಕಾಗೋಡು
ಶಿವಮೊಗ್ಗ , ಗುರುವಾರ, 29 ಡಿಸೆಂಬರ್ 2016 (10:42 IST)
ರಾಜ್ಯದಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಜನಪರ ಆಡಳಿತ ನೀಡುತ್ತಿದೆ. ಅನ್ನಭಾಗ್ಯ ಸಾಮಾನ್ಯವಾದ ಯೋಜನೆ ಅಲ್ಲ. ತಮಿಳುನಾಡಿನಲ್ಲಿ ಜನಪರ ಯೋಜನೆ ಜಾರಿ ಮಾಡಿದ್ದ ಜಯಲಲಿತಾ ಅವರನ್ನು ಪ್ರೀತಿಯಿಂದ ಅಮ್ಮಾ ಎಂದು ಕರೆಯುತ್ತಾರೆ. ಅದೇ ರೀತಿ ಸಿಎಂ ಸಿದ್ದರಾಮಯ್ಯ ಅವರನ್ನು ಅಪ್ಪ ಎಂದು ಕರೆಯಬೇಕು ಎಂದು ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಹಾಸ್ಯ ಚಟಾಕಿ ಸಿಡಿಸಿದ್ದಾರೆ. 
 
ಶಿವಮೊಗ್ಗ ನಗರದ ಕಾಂಗ್ರೆಸ್ ಭವನದಲ್ಲಿ ನಡೆದ ಕಾಂಗ್ರೆಸ್ ಸಂಸ್ಥಾಪನಾ ದಿನಾಚರಣೆಯಲ್ಲಿ ಮಾತನಾಡಿದ ಅವರು, ರಾಜ್ಯ ಸರಕಾರ ಹಲವಾರು ಜನಪರ ಯೋಜನೆಗಳನ್ನು ಜಾರಿಗೆ ತಂದಿದೆ. ಈ ಯೋಜನೆಗಳನ್ನು ಅರ್ಹ ಫಲಾನುಭವಿಗಳಿಗೆ ತಲುಪಿಸುವ ಜವಾಬ್ದಾರಿ ಪಕ್ಷದ ಕಾರ್ಯಕರ್ತರ ಮೇಲಿದೆ ಎಂದು ಹೇಳಿದರು.
 
ಬಗರ್ ಹುಕುಂ ಸಾಗುವಳಿ ಪತ್ರ ಹಾಗೂ ಅಕ್ರಮ ಸಕ್ರಮ ನಿವೇಶನ ಹಕ್ಕುಪತ್ರ ಸಾಕಷ್ಟು ಸಂಖ್ಯೆಯಲ್ಲಿ ನೀಡಬೇಕಿದೆ. ಬಗರ್ ಹುಕುಂ ಕಾಯ್ದೆ ಅಡಿಯಲ್ಲಿ ರಾಜ್ಯದ ಸುಮಾರು 4 ಅರ್ಜಿಗಳು ಬಂದಿವೆ ಎಂದು ತಿಳಿಸಿದರು.
 
ತ್ವರಿತಗತಿಯಲ್ಲಿ ಸಮಸ್ಯೆ ಇತ್ಯರ್ಥಪಡಿಸಲು ಸಭೆ ನಡೆಸುವಂತೆ ಸೂಚನೆ ನೀಡಿದರೂ ಅಧಿಕಾರಿಗಳಾಗಲೀ ಪಕ್ಷದ ಕಾರ್ಯಕರ್ತರಾಗಲಿ ಇಚ್ಚಾಶಕ್ತಿ ತೊರಿಸುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. 


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಶಿಯೋಮಿಯಿಂದ ಹೊಸ ನೋಟ್ 4ಎಕ್ಸ್ ಫೋನ್