ದಕ್ಷ ಅಧಿಕಾರಿ ಡಿ.ಕೆ.ರವಿ ಪೋಷಕರಿಗೆ ಪುಡಿಗಾಸು ಹಣ ನೀಡುವ ಮೂಲಕ ರಾಜ್ಯ ಸರಕಾರ ತನ್ನ ಕೈತೊಳೆದುಕೊಳ್ಳಲು ಮುಂದಾಗಿದೆ.
ಕಾನೂನು ಸಚಿವರಾದ ಟಿ.ಬಿ.ಜಯಚಂದ್ರ ಅವರು ಡಿ.ಕೆ.ರವಿಯ ಪೋಷಕರಿಗೆ ಮಾಸಾಶನ ಮಂಜೂರಾತಿ ಪತ್ರ ವಿತರಿಸಿದರು. ಡಿ.ಕೆ. ರವಿಯ ತಂದೆ ಕರಿಯಪ್ಪ ಹಾಗೂ ತಾಯಿ ಗೌರಮ್ಮನವರಿಗೆ ಪ್ರತಿ ತಿಂಗಳಿಗೆ ಐದು ನೂರು ರೂಪಾಯಿಯ ಮಾಸಾಶನ ಪತ್ರ ವಿತರಿಸಲಾಯಿತು.
ದಕ್ಷ ಅಧಿಕಾರಿ ಡಿ.ಕೆ.ರವಿ ಅವರು ಸಾವನ್ನಪಿದ್ದ ಸಂದರ್ಭದಲ್ಲಿ ಹಾಕಲಾಗಿದ್ದ ಶಾಮೀಯಾನದ ಖರ್ಚು 39 ಸಾವಿರ ರೂಪಾಯಿಯನ್ನು ತುಮಕೂರು ಜಿಲ್ಲಾಧಿಕಾರಿ ಇಲಾಖೆಯ ವತಿಯಿಂದ ಭರಿಸಲಾಯಿತು.
ರವಿ ಅವರ ಕುಟುಂಬ ವಾಸವಾಗಿರುವ ಸ್ಥಳದಲ್ಲಿ ಕೃಷಿ ಹೊಂಡ ನಿರ್ಮಾಣ ಮಾಡಲು ಸಣ್ಣ ನೀರಾವರಿ ಇಲಾಖೆ ಮುಂದಾಗಿದ್ದು, ರವಿ ಅವರ ಹುಟ್ಟುರಾದ ದೊಡ್ಡಕೊಪ್ಪಲು ಪೊಡಿ ಮುಕ್ತ ಗ್ರಾಮವನ್ನಾಗಿಸಲು ಸರಕಾರ ನಿರ್ಧರಿಸಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ