Publish Date: Wed, 01 Mar 2017 (12:11 IST)
Updated Date: Wed, 01 Mar 2017 (12:13 IST)
ಬೆಂಗಳೂರು: ಯಡಿಯೂರಪ್ಪ ಮತ್ತು ಸಿಎಂ ಸಿದ್ದರಾಮಯ್ಯ ನಡುವಿನ ಫೈಟ್ ತಾರಕಕ್ಕೇರಿದೆ. ಯಡಿಯೂರಪ್ಪ ವಿರುದ್ದ ವಾಗ್ದಾಳಿ ನಡೆಸಿರುವ ಸಿದ್ಧರಾಮಯ್ಯ ಲೆಹರ್ ಸಿಂಗ್ ಡೈರಿ ನಕಲಿಯಾದ್ರೆ ಗೋವಿಂದರಾಜು ಡೈರಿಯೂ ನಕಲಿಯೇ ಎಂದಿದ್ದಾರೆ.
ಯಡಿಯೂರಪ್ಪ ದೇಶ ಕಂಡ ಕಡು ಭ್ರಷ್ಟ ರಾಜಕಾರಣಿ. ಬಿಜೆಪಿಯಲ್ಲಿದ್ದ ಲೆಹರ್ ಸಿಂಗ್ ಈಗ ಪಕ್ಷದಲ್ಲಿ ಇಲ್ಲದಿದ್ದರೇನಂತೆ? ಅವರ ಡೈರಿಯಲ್ಲೂ ಕಪ್ಪದ ಬಗ್ಗೆ ಮಾಹಿತಿಯಿಲ್ವಾ? ಲೆಹರ್ ಸಿಂಗ್ ಡೈರಿ ನಕಲಿ ಎಂದು ಬಿಜೆಪಿಯವರು ಬೊಬ್ಬೆ ಹೊಡೆಯುತ್ತಿದ್ದಾರೆ. ಹಾಗಿದ್ದರೆ, ಗೋವಿಂದರಾಜು ಡೈರಿಯೂ ನಕಲಿಯೇ ಎಂದು ವಾದಿಸಿದರು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.