Publish Date: Fri, 20 Apr 2018 (09:14 IST)
Updated Date: Fri, 20 Apr 2018 (15:22 IST)
ಬೆಂಗಳೂರು: ಇತ್ತೀಚೆಗೆ ರಾಜಕೀಯ ನಾಯಕರಿಗೆ ಸೇಬಿನ ಹಾರದ ಸ್ವಾಗತ ಮಾಡುವ ಪದ್ಧತಿ ಹೆಚ್ಚುತ್ತಿದೆ. ಮೊನ್ನೆಯಷ್ಟೇ ಸಚಿವ ಡಿಕೆ ಶಿವಕುಮಾರ್, ಎಚ್ ಡಿ ಕುಮಾರಸ್ವಾಮಿ ತಮ್ಮ ಬೆಂಬಲಿಗರಿಂದ ಸೇಬಿನ ಹಾರದ ಸ್ವಾಗತ ಪಡೆದಿದ್ದರು.
ಇದೀಗ ಅದು ಸಿಎಂ ಸಿದ್ದರಾಮಯ್ಯಗೂ ಸಿಕ್ಕಿದೆ. ವರುಣಾ ಕ್ಷೇತ್ರದಲ್ಲಿ ತಮ್ಮ ಪುತ್ರ ಡಾ. ಯತೀಂದ್ರ ಪರ ಪ್ರಚಾರ ನಡೆಸಲು ಆಗಮಿಸಿದ ಸಿಎಂ ಸಿದ್ದರಾಮಯ್ಯಗೆ ಸೇಬಿನ ಹಾರದ ಸ್ವಾಗತ ಕೋರಲಾಗಿದೆ.
ಗ್ರಾಮವೊಂದರ ಮುಖ್ಯಸ್ಥ ಅನಿಲ್ ಎಂಬವರು ಸುಮಾರು 350 ಕೆ.ಜಿ. ತೂಕದ ಸೇಬಿನ ಹಾರ ಹಾಕಿ ಸಿಎಂಗೆ ಭರ್ಜರಿ ಸ್ವಾಗತ ಕೋರಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.