Publish Date: Fri, 21 Jul 2017 (09:53 IST)
Updated Date: Fri, 21 Jul 2017 (09:55 IST)
ಬೆಂಗಳೂರು: ಸಿಎಂ ಸಿದ್ದರಾಮಯ್ಯ ನಿನ್ನೆ ಕಂಠೀರವ ಸ್ಟೇಡಿಯಂನಲ್ಲಿ ಮೇಲ್ದರ್ಜೆಗೇರಿಸಿದ್ದ ಒಳಾಂಗಣ ಮೈದಾನವನ್ನು ಉದ್ಘಾಟಿಸಿದರು. ತಮ್ಮ ಸಹೋದ್ಯೋಗಿಗಳ ಜತೆ ಆಗಮಿಸಿದ ಸಿಎಂ ಬಾಸ್ಕೆಟ್ ಬಾಲ್ ಆಡಲು ಹೋಗಿ ಪೆಚ್ಚಾದ ಘಟನೆಯೂ ನಡೆಯಿತು.
ಸಿಎಂ ಸಿದ್ದರಾಮಯ್ಯ ಅತ್ಯುತ್ಸಾಹದಿಂದ ಕೈಯಲ್ಲಿ ಬಾಲ್ ಹಿಡಿದುಕೊಂಡು ಕುಣಿಕೆಯೊಳಗೆ ಬಾಲ್ ತಳ್ಳಲು ಯತ್ನಿಸಿದರೂ ಅದು ಹೋಗಲಿಲ್ಲ. ಹಲವು ಬಾರಿ ಪ್ರಯತ್ನಿಸಿ ವಿಫಲರಾದಾಗ ಅಲ್ಲಿ ನೆರೆದಿದ್ದ ಮಕ್ಕಳು ‘ಕೋಚ್ ಸಹಾಯ ತಗೊಳ್ಳಿ ಸಾರ್’ ಎಂದು ಕಿಚಾಯಿಸಿದರು.
ಮೊದಲೇ ಬಾಲ್ ಹಾಕಲಾಗದ ಬೇಜಾರು ಅದರ ನಡುವೆ ಹುಡುಗು ಬುದ್ಧಿಯ ಮಕ್ಕಳ ಲೇವಡಿ ಸಿಎಂ ಕೊಂಚ ಪೆಚ್ಚಾದರು. ಆದರೂ ಕೊನೆಗೂ ತಮ್ಮ ಪ್ರಯತ್ನದಲ್ಲಿ ಸಫಲರಾದರು ಬಿಡಿ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ