Publish Date: Fri, 09 Mar 2018 (14:07 IST)
Updated Date: Fri, 09 Mar 2018 (14:09 IST)
ಮೈಸೂರು: ಆಡಳಿತಾತ್ಮಕ ವಿಚಾರವನ್ನು ಬೀದಿಯಲ್ಲಿ ಮಾತಾಡಕ್ಕಾಗುತ್ತೇನ್ರೀ?... ಹೀಗಂತ ಸಿಎಂ ಸಿದ್ದರಾಮಯ್ಯ ಮಾಧ್ಯಮಗಳಿಗೆ ಗರಂ ಆಗಿ ಪ್ರಶ್ನಿಸಿದ್ದಾರೆ.
ಅಧಿಕಾರಿ ರೋಹಿಣಿ ಸಿಂಧೂರಿ ವರ್ಗಾವಣೆಗೆ ಸಿಎಟಿ ತಡೆಯಾಜ್ಞೆ ನೀಡಿರುವುದರ ಬಗ್ಗೆ ಮಾಧ್ಯಮಗಳು ಪ್ರಶ್ನಿಸಿದಾಗ ಸಿಎಂ ಸಿದ್ದರಾಮಯ್ಯ ಕೊಂಚ ಗರಂ ಆದರು.
ಮೈಸೂರಿನ ಪಿರಿಯಾಪಟ್ಟಣದಲ್ಲಿ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಿಎಂ ಸಿದ್ದರಾಮಯ್ಯ ‘ಹಾದಿ ಬೀದಿಯಲ್ಲೆಲ್ಲಾ ಇದರ ಬಗ್ಗೆ ಮಾತಾಡಕ್ಕಾಗಲ್ಲ. ವರ್ಗಾವಣೆ ಆದೇಶಕ್ಕೆ ತಡೆಯಾಜ್ಞೆ ನೀಡಿರುವುದನ್ನು ತೆರವುಗೊಳಿಸುತ್ತೇವೆ’ ಎಂದಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ