ಬೆಂಗಳೂರು: ವಿಧಾನಸಭೆ ಕಲಾಪ ನಡೆಯುತ್ತಿದ್ದರೂ, ಕಲಾಪ ಹಾಜರಾಗದ ಶಾಸಕರು ಮತ್ತು ಸಚಿವರ ಮೇಲೆ ಸಿಎಂ ಸಿದ್ದರಾಮಯ್ಯ ಸಿಟ್ಟಿಗೆದ್ದಿದ್ದಾರೆ.
ಕಲಾಪಕ್ಕೆ ಮೊದಲು ಶಾಸಕಾಂಗ ಪಕ್ಷದ ಸಭೆ ಕರೆಯಲಾಗಿತ್ತು. ಆದರೆ ಸಭೆಯಲ್ಲಿ ಪಾಲ್ಗೊಳ್ಳಲು ಶಾಸಕರು ನಿರಾಸಕ್ತಿ ತೋರಿದ್ದರು. ಬೆಳಿಗ್ಗೆ 8.30 ಕ್ಕೆ ಆರಂಭವಾಗಬೇಕಿದ್ದ ಸಭೆ ಶಾಸಕರ ಗೈರಿನಿಂದಾಗಿ ಒಂದು ಗಂಟೆ ತಡವಾಗಿ ಆರಂಭವಾಯಿತು.
ಈ ಸಂದರ್ಭದಲ್ಲಿ ಸ್ವತಃ ಸಿಎಂ ಸಿದ್ದರಾಮಯ್ಯನವರೇ ಶಾಸಕರಿಗಾಗಿ ಕಾಯುವ ಪರಿಸ್ಥಿತಿ ಎದುರಾಗಿತ್ತು. ಇದರಿಂದಾಗಿ ಕೆಂಡಾಮಂಡಲರಾದ ಸಿಎಂ ಜವಾಬ್ದಾರಿಯುತವಾಗಿ ವರ್ತಿಸಲು ಆದೇಶಿಸಿದರು.
ಸಿಎಂ ಮಾತಿಗೆ ಧ್ವನಿಗೂಡಿಸಿದ ಕೆಪಿಸಿಸಿ ಅಧ್ಯಕ್ಷ ಜಿ. ಪರಮೇಶ್ವರ್ ಶಾಸಕರಿಗೆ ಕಿವಿ ಮಾತು ಹೇಳಿದರು. ಸದನ ನಡೆಯುವಾಗ ಕನಿಷ್ಠ ಒಂದು ಗಂಟೆಯಾದರೂ, ಕಲಾಪದಲ್ಲಿ ಪಾಲ್ಗೊಳ್ಳುವಂತೆ ಸಿಎಂ ಬುದ್ಧಿವಾದ ಹೇಳಿದರು.