Publish Date: Sat, 08 Jul 2017 (12:17 IST)
Updated Date: Sat, 08 Jul 2017 (12:21 IST)
ಬೆಂಗಳೂರು: ಸಿಎಂ ಸಿದ್ದರಾಮಯ್ಯ ಆಪ್ತರಾದ ಸಚಿವ ಎಸ್. ಮಹದೇವಪ್ಪ ವೇದಿಕೆ ಮೇಲೆ ಗೈರಾಗಿರುವುದಕ್ಕೆ ಇನ್ನೊಬ್ಬ ಸಚಿವ ಎಚ್. ಆಂಜನೇಯ ಮೇಲೆ ಗರಂ ಆದ ಘಟನೆ ನಡೆದಿದೆ.
ಅಂಬೇಡ್ಕರ್ ಅವರ 106 ನೇ ವರ್ಷಾಚರಣೆಯ ಕುರಿತಾದ ಸುದ್ದಿಗೋಷ್ಠಿಯಲ್ಲಿ ಮಾತನಾಡಲು ಆಗಮಿಸಿದ್ದ ಸಿಎಂಗೆ ಮಹದೇವಪ್ಪ ಗೈರಾಗಿರುವುದು ಕಂಡು ಬಂತು. ತಕ್ಷಣ ಪಕ್ಕದಲ್ಲಿದ್ದ ಸಮಾಜ ಕಲ್ಯಾಣ ಇಲಾಖೆ ಸಚಿವ ಆಂಜನೇಯ ಅವರ ಬಳಿ ವಿಚಾರಿಸಿದರು. ಆಗ ಸಚಿವರು ಮಹದೇವಪ್ಪನವರಿಗೆ ಆರೋಗ್ಯ ಸರಿ ಇಲ್ಲ. ಅದಕ್ಕೇ ಬರಲಿಲ್ಲ ಎಂದು ಸಾಬೂಬು ಹೇಳಿದರು.
ಇದರಿಂದ ಗರಂ ಆದ ಸಿಎಂ ತಕ್ಷಣ ಫೋನ್ ಮಾಡಲು ಸೂಚಿಸಿದರಲ್ಲದೆ, ಸಚಿವರು ವೇದಿಕೆಗೆ ಬರುವವರೆಗೂ ಕಾದು ನಂತರ ಸುದ್ದಿಗೋಷ್ಠಿ ಆರಂಭಿಸಿದರು. ಅವರಿಗೆ ಆರೋಗ್ಯ ಚೆನ್ನಾಗಿಯೇ ಇದೆ ಎಂದು ಆಂಜನೇಯ ಅವರಿಗೆ ಹೇಳಿದ್ದು ಅಲ್ಲಿದ್ದವರ ಗಮನ ಸೆಳೆಯಿತು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ