ದರ್ಶನ್ ಗೆ ಸಹಾಯ ಮಾಡಿದ ಸಚಿವನಿಗೆ ಸಿಎಂ ಸಿದ್ದರಾಮಯ್ಯ ಕ್ಲಾಸ್

Krishnaveni K
ಶುಕ್ರವಾರ, 30 ಆಗಸ್ಟ್ 2024 (11:21 IST)
ಬೆಂಗಳೂರು: ಪರಪ್ಪನ ಅಗ್ರಹಾರ ಜೈಲಿನಲ್ಲಿ ರಾಜಾತಿಥ್ಯ ಪಡೆದ ತಪ್ಪಿಗೆ ಈಗ ಬಳ್ಳಾರಿ ಜೈಲಿಗೆ ವರ್ಗಾವಣೆಯಾಗಿರುವ ನಟ ದರ್ಶನ್ ಗೆ ಸಹಾಯ ಮಾಡಿದ್ದ ಸಚಿವನಿಗೆ ಸಿಎಂ ಸಿದ್ದರಾಮಯ್ಯ ಕ್ಲಾಸ್ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ.

ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾಗ ದರ್ಶನ್ ಗೆ ಎಲ್ಲಾ ರೀತಿಯ ಸಹಾಯ ಮಾಡಲು ರಾಜ್ಯ ಸರ್ಕಾರದ ಪ್ರಭಾವಿ ಸಚಿವರೇ ವ್ಯವಸ್ಥೆ ಮಾಡಿಕೊಟ್ಟಿದ್ದರು ಎನ್ನಲಾಗಿತ್ತು. ಸಚಿವರ ಕೃಪೆಯಿಂದ ದರ್ಶನ್ ಗೆ ಜೈಲಿನಲ್ಲಿ ಬಿರಿಯಾನಿ, ಸಿಗರೇಟು, ಕಾಫಿ ಎಂದು ಎಲ್ಲಾ ರೀತಿಯ ವ್ಯವಸ್ಥೆಯೂ ಆಗಿತ್ತು.

ದರ್ಶನ್ ಗೆ ರಾಜಾತಿಥ್ಯ ನೀಡಿದ ವಿಚಾರ ಸರ್ಕಾರಕ್ಕೇ ಮುಜುಗರ ತಂದಿತ್ತು. ವಿಪಕ್ಷಗಳೂ ಸರ್ಕಾರದ ವಿರುದ್ಧ ಹರಿಹಾಯ್ದಿದ್ದವು. ಇದೀಗ ಸಿಎಂ ಸಿದ್ದರಾಮಯ್ಯ ಆ ಸಚಿವರನ್ನು ಕರೆಸಿ ಹೀಗೆಲ್ಲಾ ಮಾಡಬೇಡಿ ಎಂದು ಕ್ಲಾಸ್ ತೆಗೆದುಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

ನಾಗೇಂದ್ರಗೆ ಆದ ಗತಿಯೇ ನಿನಗೂ ಆದರೆ ಏನು ಮಾಡ್ತೀಯಾ? ಹೀಗೆಲ್ಲಾ ಮಾಡಲು ಹೋಗಬೇಡ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ. ದರ್ಶನ್ ವಿರುದ್ಧ ಮರ್ಡರ್ ಕೇಸ್ ದಾಖಲಾದಾಗಲೂ ಪ್ರಭಾವಿ ಸಚಿವರು ಪ್ರಭಾವ ಬೀರಲು ಪ್ರಯತ್ನಿಸಿದ್ದರು ಎಂಬ ಆರೋಪ ಕೇಳಿಬಂದಿತ್ತು. ಆಗಲೂ ಸಿಎಂ ಸಿದ್ದರಾಮಯ್ಯ ಆ ಸಚಿವರನ್ನು ಕರೆಸಿ ಬುದ್ಧಿವಾದ ಹೇಳಿದ್ದರು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ವಿಧಾನಸೌಧದ ಎದುರು ಕಿತ್ತಾಟ, 11ಮಂದಿ ಅರೆಸ್ಟ್‌

ತಿರುಮಲ ಲಡ್ಡು ಕಲಬೆರಕೆ ಪ್ರಕರಣ, ಮತ್ತೊಂದು ಬೆಚ್ಚಿಬೀಳಿಸುವ ಅಂಶ

ಕಾಂಗ್ರೆಸ್ ಎರಡೂವರೆ ವರ್ಷ ಪೂರೈಸಿದ್ದೇ ಸಾಧನೆ: ವಿಜಯೇಂದ್ರ

ಸಿದ್ದರಾಮಯ್ಯ ಸಿಎಂ ಸ್ಥಾನ ಬಿಟ್ಟುಕೊಡಲ್ಲ, ಡಿಕೆಶಿ ಆ ಸ್ಥಾನದಲ್ಲಿ ಮುಂದುವರೆಯಲು ಬಿಡಲ್ಲ: ಪ್ರಹ್ಲಾದ್ ಜೋಶಿ

ರೈಲಿನ ಎಸಿ ಕೋಚ್‌ನಲ್ಲಿ ಕೆಟಲ್‌ನಲ್ಲಿ ನೂಡಲ್ಸ್ ಮಾಡಿದ ಮಹಿಳೆಗೆ ಇದೀಗ ಢವಢವ

ಮುಂದಿನ ಸುದ್ದಿ
Show comments