Select Your Language

Notifications

webdunia
webdunia
webdunia
webdunia

ಸಾರ್ವಜನಿಕ ವೇದಿಕೆಯಲ್ಲೇ ಎಎಸ್‌ಪಿಗೆ ಹೊಡೆಯಲು ಮುಂದಾದ ಸಿಎಂ: ಸಿದ್ದರಾಮಯ್ಯ ಕೋಪಕ್ಕೆ ಭಾರೀ ಟೀಕೆ

ಸಿಎಂ ಸಿದ್ದರಾಮಯ್ಯ

Sampriya

ಬೆಳಗಾವಿ , ಸೋಮವಾರ, 28 ಏಪ್ರಿಲ್ 2025 (18:11 IST)
Photo Credit X
ಬೆಳಗಾವಿ: ಸಿಎಂ ಸಿದ್ದರಾಮಯ್ಯ ಅವರು ವೇದಿಕೆ ಮೇಲೆ ಪೊಲೀಸ್ ಅಧಿಕಾರಿಯೊಬ್ಬರಿಗೆ ಕೈ ಎತ್ತಿ ಹೊಡೆಯಲು ಮುಂದಾದ ಘಟನೆ ಇಂದು ನಡೆದಿದೆ. ಸಮವಸ್ತ್ರದಲ್ಲಿದ್ದ ಧಾರವಾಡ ಎಎಸ್​ಪಿ ನಾರಾಯಣ ಭರಮನಿ ಅವರ ಮೇಲೆ ಸಿಎಂ ಕೈ ಎತ್ತಿದ್ದಾರೆ. ಸದ್ಯ ಸಿಎಂ ಕೋಪಿಸಿಕೊಂಡು ಕೈ ಎತ್ತಿರುವ ವಿಡಿಯೋ ಇದೀಗ ಎಲ್ಲೆಡೆ ವೈರಲ್ ಆಗುತ್ತಿದ್ದು, ಸಿಎಂ ನಡೆಗೆ ಭಾರೀ ವಿರೋಧ ವ್ಯಕ್ತವಾಗುತ್ತಿದೆ.

ನಿರಂತರ ಬೆಲೆ ಏರಿಕೆ ಖಂಡಿಸಿ ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ಬೆಳಗಾವಿಯಲ್ಲಿ ಪ್ರತಿಭಟನೆ ಹಮ್ಮಿಕೊಂಡಿತ್ತು. ಈ ಪ್ರತಿಭಟನೆಗೆ ಸಿಎಂ ಸಿದ್ದರಾಮಯ್ಯ ಕೂಡ ಬಂದಿದ್ದರು. ಕಾಂಗ್ರೆಸ್ ಪ್ರತಿಭಟನೆಯನ್ನು ಖಂಡಿಸಿ ನಗರದಲ್ಲಿ ಬಿಜೆಪಿ ಮಹಿಳಾ ಕಾರ್ಯಕರ್ತೆಯರು ಕೂಡ ಪ್ರತಿಭಟನೆ ಮಾಡುತ್ತಿದ್ದರು.

ಬಿಜೆಪಿ ಕಾರ್ಯಕರ್ತರು, ಕಾಂಗ್ರೆಸ್ ಮಾಡುತ್ತಿದ್ದ ಪ್ರತಿಭಟನಾ ಸ್ಥಳಕ್ಕೆ ಎಂಟ್ರಿ ನೀಡಿತ್ತು. ಈ ವಿಷಯವನ್ನು ಸಿಎಂ ಸಿದ್ದರಾಮಯ್ಯಗೆ ತಿಳಿಸಲು ಬಂದ ಎಎಸ್‌ಪಿಗೆ ಸಿದ್ದರಾಮಯ್ಯ ಹೊಡೆಯಲು ಕೈ ಎತ್ತುತ್ತಾರೆ.

ಬಿಜೆಪಿ ಕಾರ್ಯಕರ್ತರು ವೇದಿಕೆಗೆ ನುಗ್ಗುತ್ತಿದ್ದಾರೆ ಎಂದು ಸಿಎಂಗೆ ಮಾಹಿತಿ ನೀಡುತ್ತಾರೆ. ಅದಕ್ಕೆ ಕೋಪಿಸಿಕೊಂಡ ಸಿದ್ದರಾಮಯ್ಯ, ವೇದಿಕೆಗೆ ಬರುವ ತನಕ ನೀವು ಏನು ಮಾಡುತ್ತಿದ್ದೀರಿ? ಅಂತಾ ಅಧಿಕಾರಿ ಮೇಲೆ ಕೈಎತ್ತಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

Tejasvi Surya: ಪಕ್ಕದ ರಾಜ್ಯದಲ್ಲಿ ಆನೆ ತುಳಿದು ಸತ್ತವರಿಗೆ 20 ಲಕ್ಷ ರಾಜ್ಯ ಸರ್ಕಾರ ನಮ್ಮವರಿಗೆ ಕೊಡೋದು 10 ಲಕ್ಷ ಮಾತ್ರ