Select Your Language

Notifications

webdunia
webdunia
webdunia
webdunia

ನೆರೆಪೀಡಿತ ಪ್ರದೇಶದ ಭೇಟಿಗೆ ಕಾರವಾರಕ್ಕೆ ಪ್ರಯಾಣ ಬೆಳೆಸಿದ ಸಿಎಂ ಸಿದ್ದರಾಮಯ್ಯ

Karvara Rain Effected Area

Sampriya

ಕಾರವಾರ , ಭಾನುವಾರ, 21 ಜುಲೈ 2024 (13:12 IST)
photo Courtesy Instagram
ಕಾರವಾರ: ಪ್ರವಾಹಪೀಡಿತ ಪ್ರದೇಶಗಳಿಗೆ ಭೇಟಿ ನೀಡುವ ಸಲುವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಾರವಾರಕ್ಕೆ ಪ್ರಯಾಣ ಬೆಳೆಸಿದರು. ಈ ಸಂದರ್ಭದಲ್ಲಿ ನೆರೆಪೀಡಿತ ಪ್ರದೇಶಗಳಲ್ಲಿ ಕೈಗೊಂಡಿರುವ ಪರಿಹಾರ ಕ್ರಮಗಳ ಬಗ್ಗೆ ಮಾಹಿತಿ ಪಡೆದರು.

ಅಂಕೋಲಾ ತಾಲೂಕಿನ ಶಿರೂರಿನಲ್ಲಿ ಜುಲೈ 16ರಂದು ಗುಡ್ಡ ಕುಸಿದು 10 ಜನರು ಸಾವನ್ನಪ್ಪಿದ್ದರು. ದುರಂತ ಸಂಭವಿಸಿದ ಸ್ಥಳಕ್ಕೆ ಇಂದು ಸಿಎಂ ಸಿದ್ದರಾಮಯ್ಯ ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದಾರೆ.

ಬೆಂಗಳೂರಿನಿಂದ ವಿಮಾನದ ಮೂಲಕ ಗೋವಾಕ್ಕೆ ಆಗಮಿಸಿಲಿರುವ ಸಿಎಂ, ಅಲ್ಲಿಂದ ಕಾರವಾರ ಮಾರ್ಗವಾಗಿ ಮಧ್ಯಾಹ್ನ ಶಿರೂರಿಗೆ ಭೇಟಿ ನೀಡುವರು. ನಂತರ ವಾಪಸ್ ಕಾರವಾರಕ್ಕೆ ಆಗಮಿಸಿ ನೆರೆ ಪರಿಸ್ಥಿತಿ ಬಗ್ಗೆ ಅಧಿಕಾರಿಗಳೊಂದಿಗೆ ಸಭೆ ನಡೆಸುವರು.

ಗುಡ್ಡ ಕುಸಿತದಿಂದ ಅಂಗಡಿಯೊಂದರ ಮೇಲೆ ಮಣ್ಣು ಬಿದ್ದು ಅಂಗಡಿಯಲ್ಲಿದ್ದ ಐವರು ಹಾಗೂ ತಿಂಡಿ ತಿನ್ನಲು ಬಂದಿದ್ದ ಕೇರಳದ ಲಾರಿ ಚಾಲಕ, ಕ್ಲೀನರ್ ಸೇರಿ ಹತ್ತು ಜನರು ಮೃತಪಟ್ಟಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಹಾಸನ: ಗುಡ್ಡಕುಸಿತ ಪ್ರದೇಶಕ್ಕೆ ಎಚ್‌ಡಿಕೆ, ಆರ್‌.ಅಶೋಕ್ ಭೇಟಿ