Publish Date: Fri, 17 Mar 2017 (12:12 IST)
Updated Date: Fri, 17 Mar 2017 (12:14 IST)
ವಿಧಾನಸೌಧಧಲ್ಲಿ ವಿಪಕ್ಷಗಳು ಧರಣಿ ಮುಂದುವರಿಕೆಯಿಂದ ಸಿಡಿಮಿಡಿಗೊಂಡ ಸಿಎಂ ಸಿದ್ದರಾಮಯ್ಯ ವಿಪಕ್ಷಗಳು ನಕಲಿ ಡೈರಿ ಬಗ್ಗೆ ಚರ್ಚೆಗೆ ಒತ್ತಾಯಿಸಿ ಸಮಯ ವ್ಯರ್ಥಗೊಳಿಸುತ್ತಿವೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಇದೊಂದು ರಾಜಕೀಯ ಸಂಚು. ವಿಪಕ್ಷಗಳು ಜನರ ಸಮಸ್ಯೆಗಳಿಗೆ ಸ್ಪಂದಿಸುವದು ಬಿಟ್ಟು ಕೆಟ್ಟ ರಾಜಕೀಯದಲ್ಲಿ ನಿರತವಾಗಿವೆ ಎಂದು ತಿರುಗೇಟು ನೀಡಿದರು.
ನಮ್ಮ ಬಜೆಟ್‌ಗೆ ಜನರಿಂದ ಮಾಧ್ಯಮಗಳಿಂದ ಉತ್ತಮ ಪ್ರಶಂಸೆ ವ್ಯಕ್ತವಾಗಿರುವುದು ಬಿಜೆಪಿಗೆ ಸಹಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಬಿಜೆಪಿಯವರು ಹತಾಷರಾಗಿದ್ದಾರೆ ಎಂದು ಲೇವಡಿ ಮಾಡಿದರು.
ಸಹಾರಾ ಬಿರ್ಲಾ ಕೇಸ್‌ನಲ್ಲಿ ಸುಪ್ರೀಂಕೋರ್ಟ್ ತೀರ್ಪು ನೀಡಿದೆ. ಕೋರ್ಟ್ ಕೂಡಾ ಡೈರಿ ಬಗ್ಗೆ ವಿಚಾರಣೆ ನಡೆಸಲು ತಿರಸ್ಕರಿಸಿದೆ. ಅದಾಗ್ಯೂ ಬಿಜೆಪಿಯವರು ಅನಗತ್ಯವಾಗಿ ಧರಣಿ ಮುಂದುವರಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.